ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿಕೊಂಡಿರೋ ಎಸ್.ಬಿ.ಐ. ನಿಂದ ಸಾಲ ಪಡೆದಿದ್ದರೆ ಅಥವಾ ಲೋನ್ ಪಡೆಯುವ ಯೋಜನೆ ಹಾಕಿಕೊಂಡಿದ್ರೆ ನಿಮಗೆ ಅನಾನುಕೂಲವಾಗುವಂತಹ ಸುದ್ದಿಯೊಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಾಲದ ಮೇಲಿನ ಬಡ್ಡಿ ದರ ದುಬಾರಿಯಾಗಿದೆ. ಎಸ್.ಬಿ.ಐ. ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ದರವನ್ನು (ಎಂಸಿಎಲ್‌ಆರ್) 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.
ಇದರಿಂದ ಬ್ಯಾಂಕ್‌ನ ಕೋಟ್ಯಂತರ ಗ್ರಾಹಕರು ಆಘಾತಗೊಂಡಿದ್ದಾರೆ. ಎಸ್.ಬಿ.ಐ. ಈ ನಿರ್ಧಾಾರದಿಂದಾಗಿ ಬ್ಯಾಂಕಿನಿಂದ ದೊರೆಯುವ ಎಲ್ಲ ಬಗೆಯ ಸಾಲಗಳು ದುಬಾರಿಯಾಗಿವೆ. ಇದಲ್ಲದೇ ಈಗಾಗಲೇ ಗೃಹ ಸಾಲ ಪಡೆದವರೂ ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ. ಈ ನಿರ್ಧಾರ ಹೊಸ ಮತ್ತು ಹಳೆಯ ಗ್ರಾಹಕರಿಬ್ಬರ ಮೇಲೂ ಪರಿಣಾಮ ಬೀರುತ್ತದೆ.
ರೆಪೊ ದರದಲ್ಲಿ 2.25 ರಷ್ಟು ಹೆಚ್ಚಳ
ಎಂಸಿಎಲ್‌ಆರ್ ಹೆಚ್ಚಿಸುವ ಕುರಿತು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಈ ಹಿಂದೆ ಆರ್.ಬಿ.ಐ. ರೆಪೋ ದರವನ್ನು ಹೆಚ್ಚಿಸಿದ ನಂತರ ಬ್ಯಾಂಕ್‌ನ ಬಡ್ಡಿದರವನ್ನು ಹೆಚ್ಚಿಸುವ ನಿರ್ಧಾರಕ್ಕೆ ಬಂದಿತ್ತು. ಡಿಸೆಂಬರ್‌ನಲ್ಲಿ ಸೆಂಟ್ರಲ್ ಬ್ಯಾಂಕ್ ನಡೆಸಿದ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು 35 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ.
ರೆಪೋ ದರ ಶೇ.6.25ಕ್ಕೆ ಏರಿಕೆಯಾಗಿದೆ. ಮೇ ತಿಂಗಳಿನಿಂದ ಆರ್.ಬಿ.ಐ. ರೆಪೊ ದರವನ್ನು ಶೇ.2.25ರಷ್ಟು ಹೆಚ್ಚಿಸಿದೆ. ಎಸ್.ಬಿ.ಐ. ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಒಂದರಿಂದ ಮೂರು ತಿಂಗಳ ಎಂಸಿಎಲ್‌ಆರ್ ಅನ್ನು ಶೇ.7.75 ರಿಂದ ಶೇ.8ಕ್ಕೆ ಹೆಚ್ಚಿಸಲಾಗಿದೆ.
ಆರು ತಿಂಗಳಿಂದ ಒಂದು ವರ್ಷದವರೆಗೆ ಎಂಸಿಎಲ್‌ಆರ್ ಅನ್ನು ಶೇ.8.05ರಿಂದ ಶೇ.8.30ಕ್ಕೆ ಹೆಚ್ಚಿಸಲಾಗಿದೆ. ಎರಡು ವರ್ಷದ ಎಂಸಿಎಲ್‌ಆರ್ ಶೇ.8.25ರಿಂದ ಶೇ.8.50ಕ್ಕೆ ಏರಿಸಲಾಗಿದೆ. ಅದೇ ರೀತಿ 3 ವರ್ಷಗಳ ಎಂಸಿಎಲ್ಆರ್ ಅನ್ನು 8.35% ರಿಂದ 8.60% ಕ್ಕೆ ಹೆಚ್ಚಿಸಲಾಗಿದೆ.
ಇದಕ್ಕೂ ಮುನ್ನ ಮೇ ತಿಂಗಳಿನಲ್ಲಿ ಆರ್.ಬಿ.ಐ. ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿತ್ತು. ನಂತರ ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ರೆಪೊ ದರವನ್ನು 50-50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಯಿತು.