ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್.ಬಿ.ಐ. ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ತೆರಿಗೆ ಉಳಿಸುವ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಈ FDಯಿಂದ ಇತರ ಪ್ರಯೋಜನಗಳೂ ಇವೆ.
ತೆರಿಗೆ ಉಳಿತಾಯದ ಸ್ಥಿರ ಠೇವಣಿಗಳು ಹೂಡಿಕೆಯ ಅತ್ಯಂತ ವಿಶ್ವಾಸಾರ್ಹ ವಿಧಾನಗಳಲ್ಲಿ ಒಂದಾಗಿದೆ. ಶೂನ್ಯ ಅಪಾಯದಲ್ಲಿ ಲಾಭ ಗಳಿಸಲು ಬಯಸುವ ಹೂಡಿಕೆದಾರರಿಗೆ ಇದು ಉತ್ತಮವಾದದ್ದು. ಇತರ ಬ್ಯಾಂಕ್‌ಗಳಂತೆ, ಎಸ್.ಬಿ.ಐ. ಕೂಡ ತನ್ನ ಗ್ರಾಹಕರಿಗೆ ತೆರಿಗೆ ಉಳಿಸುವ ಎಫ್.ಡಿ.ಗಳನ್ನು ನೀಡುತ್ತಿದೆ.
SBI ನೀಡುತ್ತಿರುವ ತೆರಿಗೆ ಉಳಿತಾಯದ FD ಕೇವಲ ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ನೀವು ಈ ವಿಶೇಷ ಕೊಡುಗೆಯಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ಹೆಚ್ಚು ತೆರಿಗೆ ಉಳಿತಾಯ FD ತೆರೆಯಲು ಬಯಸಿದರೆ, ನೀವು SBI ನ ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಅದನ್ನು ತೆರೆಯಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದರಲ್ಲಿ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ತೆಗೆದುಕೊಳ್ಳಬಹುದು.
ಎಸ್.ಬಿ.ಐ. ದೀರ್ಘಾವಧಿಯ ಎಫ್.ಡಿ.ಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಒಂದು ವರ್ಷದಿಂದ 10 ವರ್ಷಗಳ ಎಫ್.ಡಿ. ಗಳ ಮೇಲೆ ಶೇ.5.10 ರಿಂದ 5.40 ರವರೆಗೆ ಬಡ್ಡಿ ಲಭ್ಯವಿರುತ್ತದೆ.
ಎರಡು ವರ್ಷಕ್ಕಿಂತ ಹೆಚ್ಚು ಮತ್ತು ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್.ಡಿ.ಗಳ ಮೇಲಿನ ಬಡ್ಡಿ ದರವನ್ನು ಶೇ.5.10 ರಿಂದ ಶೇ.5.20ಕ್ಕೆ ಹೆಚ್ಚಿಸಲಾಗಿದೆ. ಮೂರರಿಂದ ಐದು ವರ್ಷಗಳ ಅವಧಿಗೆ ಬಡ್ಡಿ ದರವನ್ನು ಶೇ.5.30 ರಿಂದ ಶೇ.5.45ಕ್ಕೆ ಹೆಚ್ಚಿಸಲಾಗಿದೆ.
ಅದೇ ರೀತಿ ಎಸ್.ಬಿ.ಐ. ಕೂಡ ತೆರಿಗೆ ಉಳಿಸುವ ಎಫ್.ಡಿ.ಗಳ ಮೇಲಿನ ಬಡ್ಡಿ ದರವನ್ನು ಶೇ.5.40 ರಿಂದ ಶೇ.5.50ಕ್ಕೆ ಹೆಚ್ಚಿಸಿದೆ.
ಟ್ಯಾಕ್ಸ್ ಸೇವಿಂಗ್ ಎಫ್.ಡಿ. ತೆರೆಯುವುದು ಹೇಗೆ…?
ಇದಕ್ಕಾಗಿ ಮೊದಲು ಎಸ್.ಬಿ.ಐ. ವೆಬ್‌ಸೈಟ್‌ಗೆ ಹೋಗಿ ನೆಟ್ ಬ್ಯಾಂಕಿಂಗ್ ತೆರೆಯಿರಿ.
ಈಗ FD ಟ್ಯಾಬ್ ಅಡಿಯಲ್ಲಿ e-TDR/ESTDR ಮೇಲೆ ಕ್ಲಿಕ್ ಮಾಡಿ.
ಆದಾಯ ತೆರಿಗೆ ಉಳಿತಾಯ ಯೋಜನೆ ಆಯ್ಕೆ ಮಾಡಿಕೊಂಡು E-TDR / ESTDR ಮೇಲೆ ಕ್ಲಿಕ್ ಮಾಡಿ.
ನಂತರ Proceed ಬಟನ್ ಮೇಲೆ ಕ್ಲಿಕ್ ಮಾಡಿ. ಖಾತೆ ಮತ್ತು ಮೊತ್ತವನ್ನು ಆಯ್ಕೆ ಮಾಡಿದ ನಂತರ, ಟರ್ಮ್ ಮತ್ತು ಷರತ್ತು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಅದಾದ ಮೇಲೆ ಸಲ್ಲಿಸು ಬಟನ್ ಕ್ಲಿಕ್ ಮಾಡಿ. ಕೊನೆಯಲ್ಲಿ ದೃಢೀಕರಣ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಎಫ್.ಡಿ. ಖಾತೆ ಕನ್ಫರ್ಮ್ ಆಗುತ್ತದೆ.