ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಮೇ 10 ರಿಂದ ಜಾರಿಗೆ ಬರುವಂತೆ ದೇಶೀಯ ಬೃಹತ್ ಅವಧಿಯ ಠೇವಣಿಗಳ ಮೇಲೆ ಬಡ್ಡಿ ದರ ಹೆಚ್ಚಿಸಿದೆ.
2 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಗಳಿಗೆ ಬಡ್ಡಿದರಗಳಲ್ಲಿ ಪರಿಷ್ಕರಣೆ ಘೋಷಿಸಲಾಗಿದೆ. ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ನೀಡಲಾಗಿದೆ. ಹಿರಿಯ ನಾಗರಿಕರಿಗೆ ಇನ್ನಷ್ಟು ಹೆಚ್ಚು ಲಾಭಕರವಾಗಿರಲಿದೆ. ಅದರ ಮಾಹಿತಿಯನ್ನೂ ಕೆಳಗೆ ನೀಡಲಾಗಿದೆ
ಕೋಷ್ಟಕ (ಎಲ್ಲಾ ಅಂಕಿಅಂಶಗಳು ವರ್ಷಕ್ಕೆ ಶೇಕಡಾವಾರು)
ಅವಧಿ ಹಾಲಿ ದರ ಪರಿಷ್ಕೃತ (ಹಿರಿಯ ನಾಗರಿಕರಿಗೆ)
7-45 ದಿನಗಳು 3.00 3.00 (3.00)
46- 179 ದಿನ 3.00 3.50 (4.00)
180- 210 ದಿನ 3.10 3.50 (4.00)
211- 365 ದಿನ 3.30 3.75 (4.25)
1- 2 ವರ್ಷ 3.60 4.00 (4.50)
2- 3 ವರ್ಷ 3.60 4.25 (4.75)
3- 5 ವರ್ಷ 3.60 4.50 (5.00)
10 ವರ್ಷಗಳವರೆಗೆ 3.60 4.50 (5.00)
ಎಲ್ಲಾ ಅಂಕಿಅಂಶಗಳು ವರ್ಷಕ್ಕೆ ಶೇಕಡಾವಾರು
ಬುರ್ಖಾ ಕಡ್ಡಾಯ ವಿರುದ್ಧ ಬೀದಿಗಿಳಿದ ಅಫ್ಘಾನಿಸ್ತಾನ ಮಹಿಳೆಯರು
ಹೊಸ ಠೇವಣಿಗಳಿಗೆ ಮತ್ತು ರಿನೀವಲ್ ಆಗುವ ಠೇವಣಿಗಳಿಗೂ ಈ ಪರಿಷ್ಕೃತ ಬಡ್ಡಿದರ ಅನ್ವಯಿಸಲಾಗುತ್ತದೆ. ನಾನ್ ರೆಸಿಡೆಂಟ್ ಆರ್ಡಿನೆರಿ ಅಕೌಂಟ್ ಗಳ ಠೇವಣಿ ಮೇಲಿನ ಬಡ್ಡಿದರಗಳು ದೇಶೀಯ ನಿಶ್ಚಿತ ಅವಧಿ ಠೇವಣಿಗಳ ದರಗಳಿಗೆ ಅನುಗುಣವಾಗಿರುತ್ತವೆ.