ಅಪ್ರಾಪ್ತೆಗೆ ʼಐ ಲವ್ ಯೂʼ ಎಂದು ಹೇಳುವ ಒಂದೇ ಒಂದು ಘಟನೆಯು ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತದೆ, ಎಂದು ಗಮನಿಸಿದ ವಿಶೇಷ ನ್ಯಾಯಾಲಯವು 22 ವರ್ಷದ ಯುವಕನನ್ನು ಲೈಂಗಿಕ ಕಿರುಕುಳದ ಆರೋಪದಿಂದ ಖುಲಾಸೆಗೊಳಿಸಿದೆ.
ಪೋಕ್ಸೊ ಕಾಯ್ದೆಯಡಿಯಲ್ಲಿ ಗೊತ್ತುಪಡಿಸಿದ ವಿಶೇಷ ನ್ಯಾಯಾಲಯವು, ಆರೋಪಿಯು ಸಂತ್ರಸ್ತೆಯ ನಮ್ರತೆಗೆ ಅವಮಾನ ಮಾಡುವಂತ ಯಾವುದೇ ಕೃತ್ಯ ಎಸಗಿಲ್ಲ ಎಂದು ಮಂಗಳವಾರ ನೀಡಿದ ಆದೇಶದಲ್ಲಿ ತಿಳಿಸಿದೆ. ಘಟನೆ ನಡೆದ ಸ್ಥಳ ಮತ್ತು ಇತರ ವಿವರಗಳ ಕುರಿತು 17 ವರ್ಷದ ಸಂತ್ರಸ್ತೆ ಮತ್ತು ಆಕೆಯ ತಾಯಿಯ ಸಾಕ್ಷ್ಯಗಳಲ್ಲಿ ವಿರೋಧಾಭಾಸಗಳನ್ನು ಸಹ ಕೋರ್ಟ್ ಗಮನಿಸಿದೆ.
ಸಂತ್ರಸ್ತೆಯ ಪ್ರಕಾರ, ಘಟನೆಯ ದಿನ, ಆರೋಪಿಯು ಅವಳಿಗೆ ‘ಐ ಲವ್ ಯೂ’ ಎಂದಿದ್ದಾನೆ. ಆರೋಪಿ ಪದೇ ಪದೇ ಆಕೆಯನ್ನು ಹಿಂಬಾಲಿಸಿ ‘ಐ ಲವ್ ಯೂ’ ಎಂದು ಸಂತ್ರಸ್ತೆ ಹೇಳಿಕೆ ನೀಡಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವ ಏಕೈಕ ಘಟನೆಯು ಸಂತ್ರಸ್ತೆಯ ಕಡೆಗೆ ಆರೋಪಿಯ ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಈ ಕೃತ್ಯವು ಬಲಿಪಶುವಿನ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯದ ತನ್ನ ತೀರ್ಪಿನಲ್ಲಿ ಹೇಳಿದೆ.
‘ಅಂತರ್ ಧರ್ಮೀಯ ವಿವಾಹದಿಂದ ತಂದೆ -ಮಗಳ ಸಂಬಂಧ ಕೊನೆಯಾಗುವುದಿಲ್ಲ’ : ಮಧ್ಯಪ್ರದೇಶ ಹೈಕೋರ್ಟ್ ಅಭಿಮತ
ಸಂತ್ರಸ್ತೆಯ ವಿರುದ್ಧ ಲೈಂಗಿಕ ಉದ್ದೇಶದಿಂದ ಆರೋಪಿ ಯಾವುದೇ ಕೃತ್ಯ ಎಸಗಿದ್ದಾನೆ ಎಂಬುದಕ್ಕೆ ಯಾವುದೇ ಪುರಾವೆಗಳನ್ನು ದಾಖಲಿಸಿಲ್ಲ ಎಂದು ವಿಶೇಷ ನ್ಯಾಯಾಧೀಶೆ ಕಲ್ಪನಾ ಪಾಟೀಲ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯರ ಮೇಲಿನ ದೌರ್ಜನ್ಯ) ಮತ್ತು 2016 ರಲ್ಲಿ ಪೋಕ್ಸೋ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಸಂತ್ರಸ್ತೆ ಹಾಗೂ ಆಕೆಯ ತಾಯಿಯ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳನ್ನ ಕೋರ್ಟ್ ಗಮನಿಸಿದೆ. ಸಂತ್ರಸ್ತೆ 2016ರ ಫೆಬ್ರವರಿ 7ನೇ ತಾರೀಖಿನಂದು ಸಾರ್ವಜನಿಕ ಶೌಚಾಲಯಕ್ಕೆ ಹೋಗುವಾಗ ಆರೋಪಿ ಆಕೆಗೆ ಐ ಲವ್ ಯೂ ಎಂದನಂತೆ. ಆದರೆ ಆಕೆಯ ತಾಯಿ ಆತನ ವಿರುದ್ಧ ಆರೋಪಗಳ ಸರಣಿಯನ್ನೇ ಮಾಡಿದ್ದಾರೆ. ಆತ ತನ್ನ ಮಗಳ ಹಿಂದೆ ಸುತ್ತುತ್ತಿದ್ದ, ನೋಡಿದಾಗಲೆಲ್ಲ ಕಣ್ಣು ಒಡೆದು ಕಿರಿಕಿರಿ ನೀಡುತ್ತಿದ್ದ. ಘಟನೆಯ ದಿನದಂದು ಸಹ ಹಿಂಸೆ ನೀಡಿದ್ದ ಎಂದಿದ್ದಾರೆ. ಇದೆಲ್ಲವನ್ನು ಗಮನಿಸಿದ ಕೋರ್ಟ್ ಯುವಕನನ್ನು ಖುಲಾಸೆಗೊಳಿಸಿದೆ.