ದೇಹದ ಯಾವುದೇ ಭಾಗದಲ್ಲಿರುವ ಅನಗತ್ಯ ಕೂದಲು ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೈ-ಕಾಲುಗಳ ಮೇಲೆ ಕೂದಲು ಜಾಸ್ತಿಯಿದ್ದರೆ ಮುಜುಗರಕ್ಕೆ ಕಾರಣವಾಗುತ್ತದೆ. ಈಗ ಮಹಿಳೆಯರೊಂದೇ ಅಲ್ಲ ಪುರುಷರ ಕೂಡ ವ್ಯಾಕ್ಸಿಂಗ್ ಮಾಡಿಸಿಕೊಳ್ತಾರೆ.
ಅನಗತ್ಯ ಕೂದಲು ತೆಗೆಯಲು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಕೂದಲು ತೆಗೆಯುವಾಗ ನೋವಿಗೆ ಕಣ್ಣಲ್ಲಿ ನೀರು ಬರುವುದುಂಟು.
ಆದ್ರೆ ಮನೆಯಲ್ಲೇ ಇರುವ ಸುಲಭ ವಸ್ತುಗಳನ್ನು ಬಳಸಿ ವ್ಯಾಕ್ಸ್ ಮಾಡಿಸಿಕೊಳ್ಳಬಹುದು. ಉರಿಯಿಲ್ಲದೆ ಸುಲಭವಾಗಿ ಕೂದಲು ತೆಗೆಯಲು ಇದು ಸುಲಭ ಉಪಾಯ.
ಬೇಕಾಗುವ ಸಾಮಗ್ರಿ :
ಬೇಕಿಂಗ್ ಸೋಡಾ
ಪೇಸ್ಟ್
ಅಲಮ್
ಬಳಸುವ ವಿಧಾನ :
ಮೊದಲು ಬಿಳಿ ಬಣ್ಣದ ಯಾವುದೇ ಟೂತ್ಪೇಸ್ಟ್ ತೆಗೆದುಕೊಳ್ಳಿ. 4 ಚಮಚ ಪೇಸ್ಟ್ ಗೆ ಚಿಟಕಿ ಅಡುಗೆ ಸೋಡಾ ಹಾಗೂ ಒಂದು ಚಮಚ ಅಲಮ್ ತೆಗೆದುಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಸ್ವಲ್ಪ ನೀರನ್ನು ಹಾಕಿ. ಈ ಮಿಶ್ರಣವನ್ನು ಹತ್ತಿ ಸಹಾಯದಿಂದ ಕೂದಲಿರುವ ಜಾಗಕ್ಕೆ ಹಚ್ಚಿ. ಐದು ನಿಮಿಷ ಬಿಟ್ಟು ಚೆನ್ನಾಗಿ ತೊಳೆದುಕೊಳ್ಳಿ.