ಅಂದದ ಮುಖವೇನೋ ಇದೆ. ಹಳದಿ ಹಲ್ಲು ಸಮಸ್ಯೆಯಾಗಿದೆ. ಎಷ್ಟು ಸಲ ಬ್ರೆಶ್ ಮಾಡಿದರೂ ಹಳದಿ ಹಲ್ಲು ಬಿಳಿಯ ಬಣ್ಣಕ್ಕೆ ತಿರುಗುತ್ತಿಲ್ಲ ಎಂದು ಬೇಸರಪಡೋರು ಈ ಸ್ಟೋರಿಯನ್ನೊಮ್ಮೆ ಓದಿ.
ವಂಶವಾಹಿನಿ, ಆಹಾರ, ಹಲ್ಲಿನ ಸಮಸ್ಯೆ ಹಾಗೂ ವಯಸ್ಸಾದಂತೆಯೂ ಹಲ್ಲಿನ ಬಣ್ಣ ಬದಲಾಗಬಹುದು. ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿಕೊಂಡು ನಿಮ್ಮ ಹಲ್ಲನ್ನು ಬೆಳ್ಳಗೆ ಮಾಡಿಕೊಳ್ಳಬಹುದು.
ಸೋಡಾ: ಅಡುಗೆ ಸೋಡಾದಲ್ಲಿ ಹಲ್ಲನ್ನು ಬೆಳ್ಳಗೆ ಮಾಡುವ ಸಾಮರ್ಥ್ಯವಿದೆ. ಬಣ್ಣ ಬದಲಾಯಿಸುವುದೊಂದೆ ಅಲ್ಲದೆ, ಹಲ್ಲಿನ ಮೇಲೆ ಕುಳಿತಿರುವ ಲೋಳೆ ಅಂಶವನ್ನು ತೆಗೆದು ಹಾಕುತ್ತದೆ. ಪ್ರತಿದಿನ ಒಂದು ಟೀ ಸ್ಪೂನ್ ಅಡುಗೆ ಸೋಡಾವನ್ನು ಪೇಸ್ಟ್ ಗೆ ಸೇರಿಸಿ ಒಂದು ವಾರದವರೆಗೆ ಬ್ರೆಶ್ ಮಾಡುತ್ತ ಬಂದರೆ ಹಲ್ಲಿನ ಬಣ್ಣ ಬೆಳ್ಳಗಾಗುತ್ತದೆ. ಇಲ್ಲವೇ ಅರ್ಧ ಟೀ ಸ್ಪೂನ್ ಬೇಕಿಂಗ್ ಸೋಡಾಕ್ಕೆ ನೀರು ಸೇರಿಸಿ ಬ್ರೆಶ್ ಮಾಡಿದರೂ ಒಳ್ಳೆಯದೆ.
ನಿಂಬೆಹಣ್ಣು: ನಿಂಬೆಹಣ್ಣು ಹಲ್ಲು ಬೆಳ್ಳಗಾಗಲು ಸಹಕಾರಿ. ನಿಂಬು ಸಿಪ್ಪೆಯಿಂದ ಹಲ್ಲುಜ್ಜಬೇಕು. ಅಥವಾ ನಿಂಬೆ ರಸವನ್ನು ನೀರಿನೊಂದಿಗೆ ಬೆರಸಿ ಬಾಯಿ ಮುಕ್ಕಳಿಸುತ್ತ ಬಂದರೆ ಹಲ್ಲಿನ ಹಳದಿ ಬಣ್ಣ ತೊಲಗಿ ಬಿಳಿಯ ಬಣ್ಣಕ್ಕೆ ತಿರುಗುತ್ತದೆ.
ದಿನಕ್ಕೊಂದು ಸೇಬು: ದಂತ ವೈದ್ಯರು ದಿನಕ್ಕೊಂದು ಸೇಬು ತಿನ್ನುವಂತೆಯೂ ಸಲಹೆ ನೀಡುತ್ತಾರೆ. ಸೇಬಿನಲ್ಲಿ ಆಮ್ಲೀಯ ಗುಣವಿದ್ದು, ಇದು ಹಲ್ಲು ಬೆಳ್ಳಗಾಗಲು ಸಹಕರಿಸುತ್ತದೆ.
ಸ್ಟ್ರಾಬೆರ್ರಿ: ಸ್ಟ್ರಾಬೆರ್ರಿ ಕೂಡ ಹಲ್ಲು ಬೆಳ್ಳಗಾಗಲು ಸಹಕಾರಿ. ದಿನ ಬಿಟ್ಟು ದಿನ ಸ್ಟ್ರಾಬೆರ್ರಿ ಹಣ್ಣನ್ನು ಸಣ್ಣಗೆ ನುರಿದು, ಪೇಸ್ಟ್ ಜೊತೆ ಬ್ರೆಶ್ ಮಾಡಿ. ಉಪ್ಪಿನಲ್ಲಿ ಹಲ್ಲನ್ನು ಸ್ವಚ್ಚಗೊಳಿಸುವ ಹಾಗೂ ಬೆಳ್ಳಗೆ ಮಾಡುವ ಅಂಶವಿದೆ.
ತುಳಸಿ ಎಲೆ: ತುಳಸಿ ಎಲೆಗಳನ್ನು ಪೇಸ್ಟ್ ರೀತಿಯಲ್ಲಿ ಬಳಸಬಹುದು. ಅವು ಹಲ್ಲನ್ನು ಬೆಳ್ಳಗೆ ಮಾಡುತ್ತವೆ.
ಕಿತ್ತಳೆ: ಕಿತ್ತಳೆ ಬಾಯಿಯಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಹೊಂದಿದ್ದು, ಹಲ್ಲಿನ ಬಣ್ಣ ಬದಲಾಗುವುದನ್ನು ತಪ್ಪಿಸುತ್ತದೆ. ಒಂದು ವಾರಕ್ಕೆ ಮೂರು ಬಾರಿ ಕಿತ್ತಳೆ ಸಿಪ್ಪೆಯಿಂದ ಹಲ್ಲನ್ನು ಸ್ವಚ್ಛಗೊಳಿಸಿಕೊಂಡರೆ ಪರಿಣಾಮಕಾರಿ.