ಆಧುನಿಕ ಜೀವನಶೈಲಿ, ಆಹಾರ ಪದ್ಧತಿಯಿಂದ ಕೆಲವೊಮ್ಮೆ ಏರು ಪೇರು ಉಂಟಾಗುತ್ತದೆ. ಅದರಲ್ಲಿಯೂ, ಕೆಲವರು ಕಾಫಿ, ಟೀ ತಂಬಾಕು, ಜರ್ದಾ ಮೊದಲಾದವುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಸೇರಿದಂತೆ ಹಲವು ಕಾರಣದಿಂದ ಹಲ್ಲುಗಳ ಬಣ್ಣ ಮಾಸುತ್ತದೆ.
ಹಲ್ಲುಗಳ ಬಗ್ಗೆ ಕಾಳಜಿ ವಹಿಸದ ಪರಿಣಾಮ ತೊಂದರೆ ಅನುಭವಿಸಬೇಕಾಗುತ್ತದೆ. ಇನ್ನು ಕೆಲವರಿಗೆ ಹಲ್ಲಿನದೇ ದೊಡ್ಡ ಚಿಂತೆ. ಎಷ್ಟೆಲ್ಲಾ ಕೇರ್ ಮಾಡಿದರೂ, ಹಲ್ಲಿನ ಬಣ್ಣ ಮಾಸಿದ್ದರಿಂದ ಮುಜುಗರ ಅನುಭವಿಸುವಂತಾಗುತ್ತದೆ. ಬೇರೆಯವರ ಎದುರು ಮಾತನಾಡುವಾಗ, ತಮ್ಮ ಹಲ್ಲುಗಳು ಕಂಡರೆ ಎಂದುಕೊಳ್ಳುತ್ತಾರೆ. ಆದರೆ, ಮನೆಯಲ್ಲಿ ಬಳಸುವ ವಸ್ತುಗಳಿಂದಲೇ ಹೊಳಪು ಬರುವಂತೆ ಮಾಡಬಹುದು ಎನ್ನುತ್ತಾರೆ ತಿಳಿದವರು.
1 ಚಮಚ ತೆಂಗಿನ ಎಣ್ಣೆ, 1 ಚಮಚ ಅರಿಶಿಣ ಪುಡಿ, ಎರಡು ಹನಿ ಪುದಿನಾ ಎಣ್ಣೆ ಮಿಶ್ರಣ ಮಾಡಿಕೊಂಡು ಟೂತ್ ಬ್ರಶ್ ನಲ್ಲಿ ಸುಮಾರು 5 ನಿಮಿಷಗಳ ಕಾಲ ಹಲ್ಲನ್ನು ಉಜ್ಜಬೇಕು. ಬಳಿಕ ಬಾಯಿ ತೊಳೆದುಕೊಂಡು ಒಣಬಟ್ಟೆಯಿಂದ ಹಲ್ಲುಗಳನ್ನು ಒರೆಸಬೇಕು. ಹೀಗೆ ಸ್ವಲ್ಪ ದಿನ ಮಾಡಿದಲ್ಲಿ ಹಳದಿ ಹಲ್ಲಿಗೆ ವಿದಾಯ ಹೇಳಬಹುದು.