
ಸೂರ್ಯನ ಹಾನಿಕಾರಕ ಕಿರಣಗಳು ಮುಖದ ಮೇಲೆ ಬೀಳುವುದರಿಂದ ಚರ್ಮ ನೈಸರ್ಗಿಕವಾದ ಹೊಳಪನ್ನು ಕಳೆದುಕೊಳ್ಳುತ್ತದೆ. ಇದರಿಂದ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿವಾರಿಸಲು ರಾಸಾಯನಿಕಯುಕ್ತ ಕ್ರಿಂಗಳನ್ನು ಬಳಸುವ ಬದಲು ಈ ಮನೆಮದ್ದನ್ನು ಬಳಸಿ.
*ರೋಸ್ ವಾಟರ್ ಇದು ಚರ್ಮ ಮುಚ್ಚಿದ ರಂಧ್ರಗಳಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಮತ್ತು ಕಣ್ಣುಗಳ ಕೆಳಗಿನ ಊತವನ್ನು ಕಡಿಮೆ ಮಾಡುತ್ತದೆ. ಹಾಗಾಗಿ 2 ಚಮಚ ರೋಸ್ ವಾಟರ್ ಗೆ ಕೆಲವು ಹನಿ ಗ್ಲಿಸರಿನ್ ಮತ್ತು ½ ಚಮಚ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಹತ್ತಿಯ ಸಹಾಯದಿಂದ ಪ್ರತಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ.