ಮಹಿಳೆಯರ ಮುಖದಲ್ಲಿ ಅನಗತ್ಯ ಕೂದಲು ಸಾಮಾನ್ಯ. ಆದರೆ ಈ ಅನಗತ್ಯ ಕೂದಲು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಕೂದಲು ಬೆಳೆಯಲು ಹಾರ್ಮೋನುಗಳ ಬದಲಾವಣೆಗಳು, ಆನುವಂಶಿಕ ಕಾರಣಗಳು, ರೋಗಗಳು ಮತ್ತು ಔಷಧಿಗಳು ಕಾರಣವಾಗುತ್ತವೆ. ಅನಗತ್ಯ ಕೂದಲಿನ ಬಗ್ಗೆ ತಲೆಕೆಡಿಸಿಕೊಳ್ಳುವ ಮಹಿಳೆಯರು ಪಾರ್ಲರ್ ಗೆ ಹೋಗ್ತಾರೆ. ಆದ್ರೆ ಮನೆ ಮದ್ದಿನಿಂದಲೇ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.
ಓಟ್ ಮೀಲ್ ಮತ್ತು ಬಾಳೆಹಣ್ಣು : ಅನಗತ್ಯ ಕೂದಲನ್ನು ತೆಗೆದುಹಾಕಲು ಓಟ್ ಮೀಲ್ ಮತ್ತು ಬಾಳೆಹಣ್ಣಿನ ಸ್ಕ್ರಬ್ ಮಾಡಬಹುದು. ಇದಕ್ಕಾಗಿ ಬಾಳೆಹಣ್ಣನ್ನು ದೊಡ್ಡ ಬಟ್ಟಲಿನಲ್ಲಿ ನುರಿದುಕೊಳ್ಳಿ. ಅದಕ್ಕೆ ಓಟ್ ಮೀಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ. ಅದು ಸಂಪೂರ್ಣವಾಗಿ ಒಣಗಿದ ನಂತ್ರ ಬೆರಳುಗಳ ಸಹಾಯದಿಂದ ಉಜ್ಜುವ ಮೂಲಕ ತೆಗೆಯಿರಿ. ನಂತ್ರ ನೀರಿನಿಂದ ಮುಖ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದ್ರೆ ಅನಗತ್ಯ ಕೂದಲು ಇರುವುದಿಲ್ಲ.
ಸಕ್ಕರೆ ಮತ್ತು ಜೇನುತುಪ್ಪ: ಒಂದು ಪಾತ್ರೆಗೆ ಎರಡು ಚಮಚ ಸಕ್ಕರೆ ಪುಡಿಯನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಬಿಸಿ ಮಾಡಿ. ಸ್ವಲ್ಪ ತಣ್ಣಗಾದಾಗ ಅದನ್ನು ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ಅದನ್ನು ತೆಗೆದು ಮುಖ ತೊಳೆದುಕೊಳ್ಳಿ.