ಸುಂದರ ಹಾಗೂ ಹೊಳೆಯುವ ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹೆಚ್ಚೆಚ್ಚು ಸಿಹಿತಿಂಡಿ ತಿನ್ನುವುದರಿಂದ ಹಲ್ಲು ಜಾಸ್ತಿ ಹಾಳಾಗುತ್ತದೆ.
ಕಣ್ಣಿಗೆ ಕಾಣದ ಅನುಭವಿಸಲಾಗದ ನೋವುಣ್ಣಬೇಕಾಗುತ್ತದೆ. ಈ ನೋವು ಮುಖದ ಮೇಲಿನ ನಗುವನ್ನು ಹಾಳು ಮಾಡುತ್ತದೆ. ಹಲ್ಲು ನೋವಿಗೆ ಮಾರುಕಟ್ಟೆಯಲ್ಲಿ ಅನೇಕ ಮಾತ್ರೆಗಳಿವೆ. ಆದ್ರೆ ಮನೆ ಮದ್ದು ಹಲ್ಲು ನೋವನ್ನು ಮಾಯವಾಗುವಂತೆ ಮಾಡುತ್ತದೆ.
ಈ ಹಿಂದೆ ಹೇಳಿದಂತೆಯೇ ಹಲ್ಲು ನೋವು ನಮ್ಮ ಹಲ್ಲಿನ ಜೊತೆಗೆ ಮನಸ್ಸನ್ನು ಹಾಳು ಮಾಡುತ್ತದೆ. ಹಲ್ಲಿನ ಆರೋಗ್ಯಕ್ಕೆ ಪ್ರತಿದಿನ ಎರಡು ಬಾರಿ ಹಲ್ಲುಜ್ಜುವುದು ಬಹಳ ಮುಖ್ಯ. ಅತಿಯಾಗಿ ಸಿಹಿ ತಿಂದ್ರೆ ಹಲ್ಲು ನೋವು ಜಾಸ್ತಿಯಾಗುತ್ತದೆ.
ಹಲ್ಲು ನೋವು ಹೆಚ್ಚಾದಾಗ ಈರುಳ್ಳಿ ಮ್ಯಾಜಿಕ್ ಮಾಡುತ್ತದೆ. ಈರುಳ್ಳಿಯನ್ನು ಕತ್ತರಿಸಿ ಒಂದು ಪಾತ್ರೆಗೆ ಹಾಕಿ. ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಯನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಅದ್ರಿಂದ ಬರುವ ಹೊಗೆಯನ್ನು ನಿಧಾನವಾಗಿ ಬಾಯಿಯೊಳಗೆ ತೆಗೆದುಕೊಳ್ಳಿ. ಇದ್ರಿಂದ ಹಲ್ಲಿನಲ್ಲಿರುವ ಹುಳ ಸಾಯುತ್ತದೆ.
ಹಿಂಗು, ಹಲ್ಲಿನ ಹುಳವನ್ನು ಕೊಲ್ಲುತ್ತದೆ. ಹಿಂಗಿನ ಪುಡಿಯನ್ನು ನೀರಿಗೆ ಹಾಕಿ ಕುದಿಸಿ. ಆ ನೀರು ತಣ್ಣಗಾದ ಮೇಲೆ ಅದರಿಂದ ಬಾಯಿ ಮುಕ್ಕಳಿಸಿ. ಪ್ರತಿದಿನ ಹೀಗೆ ಮಾಡುವುದರಿಂದ ಹಲ್ಲಿನ ಹುಳು ಸಾಯುತ್ತದೆ. ಜೊತೆಗೆ ಹಲ್ಲಿನ ನೋವು ಕಡಿಮೆಯಾಗುತ್ತದೆ.