ಹೆಚ್ಚು ಎಣ್ಣೆಯ ತಿಂಡಿಗಳನ್ನು ಸೇವಿಸಿದಾಗ, ಖಾರ ತಿಂದಾಗ ಅಥವಾ ಅಲೂಗಡ್ಡೆ ವಿಪರೀತ ಸೇವಿಸಿದಾಗ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಅದರಲ್ಲೂ ಕೆಲವರಿಗೆ ರಾತ್ರಿ ಹೊತ್ತಲ್ಲೇ ವಾಯು ಪ್ರಕೋಪ ಹೆಚ್ಚುತ್ತದೆ.
ಇದು ರಾತ್ರಿಯ ನಿದ್ದೆಯನ್ನು ಕೆಡಿಸುವ ಜೊತೆಗೆ ಹೊಟ್ಟೆಯಲ್ಲಿ ಗುಡುಗುಡು, ಉರಿ, ಹುಳಿತೇಗು ಮೊದಲಾದ ಅನುಭವ ಎದುರಾಗುತ್ತದೆ. ರಾತ್ರಿಯೂಟ ಹೆಚ್ಚಾದರೂ ಅನಿಲದ ಉತ್ಪಾದನೆ ಪ್ರಮಾಣ ಹೆಚ್ಚುತ್ತದೆ.
ನೀವು ಒಮ್ಮೆ ತಿಂದ ಆಹಾರ ಸಂಪೂರ್ಣ ಜೀರ್ಣವಾಗಲು ಕನಿಷ್ಠ ಆರು ಗಂಟೆ ಬೇಕಾಗುತ್ತದೆ. ಹಾಗಾಗಿ ನಿಮ್ಮ ಒಂದು ಊಟ ಮತ್ತು ಮತ್ತೊಂದು ಊಟದ ಮಧ್ಯೆ ಆರು ಗಂಟೆ ಅಂತರವಿರಲಿ.
ಗ್ಯಾಸ್ಟ್ರಿಕ್ ಸಮಸ್ಯೆಗೆ ಸುಲಭ ಉಪಾಯವೆಂದರೆ ರಾತ್ರಿ ಮಲಗುವ ಮುನ್ನ ಇಪ್ಪತ್ತು ನಿಮಿಷ ನಡೆದಾಡಿ. ಆಯಾ ಹೊತ್ತಿಗೆ ಸರಿಯಾಗಿ ಊಟ ಮಾಡಿ. ಅ ಮಧ್ಯೆ ಏನಾದರೂ ಲಘು ಅಹಾರವನ್ನು ಸೇವಿಸಿ. ದಿನದ ಅವಧಿಯಲ್ಲಿ ನೀರು ಕುಡಿಯುವ ಪ್ರಮಾಣ ಕಡಿಮೆಯಾದರೂ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಾಯು ಪ್ರಕೋಪವನ್ನು ಹೆಚ್ಚಿಸುತ್ತದೆ. ಹೀಗಾಗಿ ತಪ್ಪದೆ ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಿರಿ.