
ಅಂಗೈ ಮತ್ತು ಪಾದದಲ್ಲಿ ವಿಪರೀತ ಬೆವರುತ್ತಿದೆಯೇ. ಇದರಿಂದ ಹ್ಯಾಂಡ್ ಶೇಕ್ ಮಾಡುವುದು ಕಷ್ಟವಾಗಬಹುದು. ಅಲ್ಲದೆ ನಡೆಯುವಾಗ ಕಾಲು ಜಾರಬಹುದು. ಇದರಿಂದ ಮುಕ್ತಿ ಪಡೆಯುವುದು ಹೇಗೆ?
ಉಗುರು ಬೆಚ್ಚಗಿನ ನೀರಿಗೆ 2-3 ಚಮಚ ಬೇಕಿಂಗ್ ಸೋಡಾ ಬೆರೆಸಿ. ನಿಮ್ಮ ಕೈ ಮತ್ತು ಕಾಲುಗಳನ್ನು ಅದರಲ್ಲಿ ಮುಳುಗಿಸಿಡಿ. ಅರ್ಧ ಗಂಟೆ ಬಳಿಕ ಹೊರತೆಗೆದು ಸರಿಯಾಗಿ ಒರೆಸಿಕೊಳ್ಳಿ. ಇದರಿಂದ ಕೈ ಕಾಲು ಬೆವರುವುದು ಕ್ರಮೇಣ ಕಡಿಮೆಯಾಗುತ್ತದೆ.
ದೇಹಕ್ಕೆ ಮಾಯಿಸ್ಚರೈಸರ್ ಹಚ್ಚಿಕೊಳ್ಳುವಂತೆ ರೋಸ್ ವಾಟರ್ ಅನ್ನು ಅಂಗೈ ಮತ್ತು ಪಾದಗಳಿಗೆ ಹಚ್ಚಿಕೊಳ್ಳಿ. ಬಳಿಕ ಮೃದುವಾಗಿ ಮಸಾಜ್ ಮಾಡಿ. ಇದು ತ್ವಚೆಯನ್ನು ತಂಪಾಗಿಸುತ್ತದೆ. ಸಹಜವಾಗಿಯೇ ಬೆವರುವ ಗುಣ ಕಡಿಮೆಯಾಗುತ್ತದೆ.
ಮುಖಕ್ಕೆ ಹಚ್ಚಿಕೊಳ್ಳುವ ಪರಿಮಳ ಬೀರುವ ಪೌಡರ್ ಅನ್ನು ತ್ವಚೆಯ ತೇವಾಂಶ ಹೀರಿಕೊಳ್ಳುತ್ತದೆ. ಅಂಗೈ ಮತ್ತು ಪಾದಗಳಿಗೆ ಇದನ್ನು ಲೇಪಿಸಿಕೊಂಡರೆ ತ್ವಚೆ ಬೆವರುವುದು ಕಡಿಮೆಯಾಗುತ್ತದೆ.