alex Certify ಪಿಸಿಓಎಸ್ ಸಮಸ್ಯೆಗೆ ಹೀಗೆ ಹೇಳಿ ಗುಡ್ ಬೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಸಿಓಎಸ್ ಸಮಸ್ಯೆಗೆ ಹೀಗೆ ಹೇಳಿ ಗುಡ್ ಬೈ

ಜೀವನಶೈಲಿ ಬದಲಾದಂತೆ ಹೊಸ ಹೊಸ ಸಮಸ್ಯೆಗಳು ಕಂಡು ಬರುತ್ತದೆ. ಅದರಲ್ಲಿ ಈ ಪಿಸಿಓಎಸ್ ಸಮಸ್ಯೆ ಕೂಡ ಒಂದು. ಇದರ ಕಾರಣದಿಂದ ಮಹಿಳೆಯರ ಅಂಡಾಶಯದಲ್ಲಿ ನೀರಿನಂತಹ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ.

ಹಾರ್ಮೋನ್ ಬಿಡುಗಡೆಯಲ್ಲಿ ವ್ಯತ್ಯಾಸ ಕಾಣಿಸಿಕೊಂಡು ಅನಿಯಮಿತವಾದ ಋತುಚಕ್ರವಾಗುತ್ತದೆ. ಬಂಜೆತನಕ್ಕೂ ಇದು ಕಾರಣವಾಗುತ್ತದೆ. ಇದನ್ನು ಕೆಲವೊಂದು ಮನೆ ಮದ್ದಿನಿಂದ ಗುಣಪಡಿಸಿಕೊಳ್ಳಬಹುದು.

*ವಾಕಿಂಗ್ ಮಾಡುವುದು, ಓಡುವುದರಿಂದ ಈ ಪಿಸಿಓಎಸ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ನಿಯಮಿತವಾಗಿ ವಾಕಿಂಗ್ ಮಾಡುತ್ತಿರಬೇಕು.

*ಹೊಟ್ಟೆಗೆ ಸಂಬಂಧಿಸಿದ ವ್ಯಾಯಾಮವನ್ನು ಹೆಚ್ಚು ಮಾಡಿ. ಇದರಿಂದ ಕೊಬ್ಬು ಸಂಗ್ರಹವಾಗುವುದನ್ನು ತಡೆಗಟ್ಟಬಹುದು, ಹಾಗೂ ತೂಕ ಕೂಡ ಕಡಿಮೆಯಾಗುತ್ತದೆ.

*ಡ್ರೈಫ್ರೂಟ್ಸ್ ಗಳಾದ ಬಾದಾಮಿ, ಗೋಡಂಬಿಯನ್ನು ದಿನಕ್ಕೆ 2 ಸೇವಿಸಿ. ಇದರಿಂದ ದೇಹಕ್ಕೆ ಬೇಕಾದ ಪ್ರೋಟಿನ್ ಸಿಗುತ್ತದೆ. ಈ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

*ಫ್ಲ್ಯಾಕ್ಸ್ ಸೀಡ್ಸ್ ಕೂಡ ಈ ಪಿಸಿಓಎಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಗಸೇಬೀಜವನ್ನು ಪುಡಿ ಮಾಡಿಕೊಳ್ಳಿ. ಬೆಳಿಗ್ಗೆ ಒಂದು ಲೋಟ ಬಿಸಿ ನೀರಿಗೆ ಇದನ್ನು 1 ಚಮಚ ಹಾಕಿ ಕುಡಿಯಿರಿ.

*ಸಿಹಿ ತಿಂಡಿ, ಕರಿದ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಿ. ಆದಷ್ಟು ಹಣ್ಣು, ತರಕಾರಿ, ಮೊಳಕೆ ಕಾಳುಗಳನ್ನು ಸೇವಿಸಿ.

*ಹಾಗಲಕಾಯಿ ಜ್ಯೂಸ್, ಅಥವಾ ಪಲ್ಯ ಸೇವಿಸಿ.

* ಒಂದು ಗ್ಲಾಸ್ ಬಿಸಿ ನೀರಿಗೆ ಸ್ವಲ್ಪ ಪುದೀನಾ ಸೊಪ್ಪನ್ನು ಸೇರಿಸಿ ಕುಡಿಯುವುದರಿಂದ ಈ ಪಿಸಿಓಎಸ್ ಸಮಸ್ಯೆಗೆ ಗುಡ್ ಬೈ ಹೇಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...