
ಕಾಳು ಮೆಣಸು
ಇದನ್ನು ಪುಡಿ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಮೊಡವೆ ಕಲೆಗಳು ಮತ್ತು ಇತರೆ ಕಲೆಗಳು ಮಾಯವಾಗುತ್ತದೆ. 2 ಚಮಚ ಮೊಸರಿಗೆ 1/4 ಚಮಚ ಕರಿ ಮೆಣಸಿನ ಪುಡಿಯನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು.
ಶುಂಠಿ
ಚರ್ಮದ ಬಣ್ಣ ಸುಧಾರಣೆ ಮತ್ತು ಯೌವನ ಪಡೆಯುವಿಕೆಗೆ ಸಹಾಯ ಮಾಡುತ್ತದೆ ಈ ಶುಂಠಿ. ಇದರ ಪೇಸ್ಟ್ ಅನ್ನು ಮುಖಕ್ಕೆ ಲೇಪಿಸುವ ಮೂಲಕ ಕಲೆಗಳನ್ನು ಕಡಿಮೆ ಮಾಡಬಹುದು.
ಕೊತ್ತಂಬರಿ
ಇದರ ಎಲೆ ಮತ್ತು ಬೀಜ ಎರಡೂ ಆಂಟಿ ಆಕ್ಸಿಡೆಂಟ್‌ಗಳನ್ನು ಒಳಗೊಂಡಿರುತ್ತದೆ. ಇವು ದೇಹಕ್ಕೆ ತಂಪು ಮತ್ತು ಹಿತ. ಕೊತ್ತಂಬರಿ ಬೀಜವನ್ನು ರಾತ್ರಿ ಇಡೀ ನೆನೆಸಿ ಮುಖದ ಕ್ಲೆನ್ಸರ್ ಆಗಿ ನೀರನ್ನು ಬಳಸಿದರೆ ಅದ್ಭುತ ಪರಿಣಾಮ ಹೊಂದಬಹುದು.
ದಾಲ್ಚಿನ್ನಿ
ಇದು ಉತ್ತಮ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. 1/2 ಚಮಚ ದಾಲ್ಚಿನ್ನಿ ಪುಡಿಗೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಂಡು ಮೊಡವೆಗಳಿರುವ ಜಾಗಕ್ಕೆ ಲೇಪಿಸಬೇಕು.
ಅರಿಶಿಣ
ಅರಿಶಿಣವು ಅದ್ಭುತ ಆಂಟಿ ಏಜಿಂಗ್, ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಸೆಪ್ಟಿಕ್ ಲಕ್ಷಣಗಳನ್ನು ಹೊಂದಿದೆ. ಇದರ ಅದ್ಭುತ ಫಲಿತಾಂಶಗಳಿಗಾಗಿ ಜೇನು ತುಪ್ಪದೊಂದಿಗೆ ಬೆರಸಿ ಮುಖಕ್ಕೆ ಹಚ್ಚಿಕೊಳ್ಳಬೇಕು.