ಹೈ ಹೀಲ್ಸ್ ಧರಿಸುವುದೆಂದರೆ ಮಹಿಳೆಯರಿಗೆ ಅಥವಾ ಯುವತಿಯರಿಗೆ ಬಹಳ ಇಷ್ಟವೇ. ಆದರೆ ನಿತ್ಯ ಅದನ್ನು ಬಳಸುವುದರಿಂದ ಹಲವು ರೀತಿಯ ಆರೋಗ್ಯದ ಸಮಸ್ಯೆಗಳು ಕಂಡು ಬಂದಾವು.
ನಿರಂತರ ಹೈ ಹೀಲ್ಸ್ ಹಾಕಿಕೊಂಡು ಓಡಾಡುವುದರಿಂದ ಕಾಲು ಹಾಗೂ ಹಿಮ್ಮಡಿ ನೋವು ಕಾಣಿಸಿಕೊಳ್ಳಬಹುದು. ಎತ್ತರದ ಶೂ ಹಾಕಿದಷ್ಟು ಮಂಡಿ ಎದುರು ಬಗ್ಗುತ್ತದೆ. ಇದರಿಂದ ಗಂಟು ನೋವು ಬಹುಬೇಗ ಅಂದರೆ ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳಬಹುದು.
ಕೆಲವೊಮ್ಮೆ ಈ ನೋವು ಒಂದೆರಡು ದಿನದಲ್ಲಿ ಅಥವಾ ತಿಂಗಳೊಳಗೆ ವಾಸಿಯಾದೀತು. ಶಾಶ್ವತವಾಗಿ ನಿಂತು ಬಿಟ್ಟರೆ ಇಳಿ ವಯಸ್ಸಿನಲ್ಲಿ ಗಂಟು ನೋವಿಗೆ ಸಂಬಂಧಿಸಿದ ಕಾಯಿಲೆಗಳು ನಿಮ್ಮನ್ನು ಕಾಡುವಂತಾದೀತು.
ಇನ್ನು ಹೈಹೀಲ್ಸ್ ಹೆಚ್ಚು ಬಳಸಿದರೆ ಬೆನ್ನು ಮೂಳೆಗೂ ಅಪಾಯವಿದೆ. ಸಣ್ಣ ವಯಸ್ಸಿನಲ್ಲೇ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಹಾಗಾಗಿ ಅವಶ್ಯಕ ಸಂದರ್ಭಗಳಲ್ಲಿ ಹಾಗೂ ಅಪರೂಪಕ್ಕೊಮ್ಮೆ ಮಾತ್ರ ಹೀಲ್ಸ್ ಬಳಸಿ.
ಹೀಗಿದ್ದೂ ಹೀಲ್ಸ್ ಹಾಕಿಕೊಂಡ ಜಾಗದಲ್ಲಿ ನೋವು ಅಥವಾ ಬಾವು ಕಾಣಿಸಿಕೊಂಡರೆ ಐಸ್ ಪೀಸ್ ಗಳಿಂದ ಕೋಲ್ಡ್ ಪ್ಯಾಕ್ ಮಾಡಿಕೊಳ್ಳಿ. ಕಾಲಿನ ಮಸಾಜ್ ಮಾಡುವುದರಿಂದಲೂ ಈ ನೋವು ದೂರವಾಗುತ್ತದೆ. ಹಾಗಾಗಿ ಹೀಲ್ಸ್ ಗಳಿಂದ ದೂರವಿದ್ದಷ್ಟು ನಿಮ್ಮ ಕಾಲಿನ ಹಾಗು ಬೆನ್ನಿನ ಆರೋಗ್ಯಕ್ಕೆ ಒಳ್ಳೆಯದು.