ಆಕರ್ಷಕ ಕಣ್ಣು ಎಲ್ಲರ ಗಮನ ಸೆಳೆಯುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದರೆ ಅದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ಮನೆ ಮದ್ದಿನ ಮೂಲಕ ಸುಲಭವಾಗಿ ಹೋಗಲಾಡಿಸಬಹುದು.
ಸೌತೆಕಾಯಿ : ಕಣ್ಣಿನ ಕೆಳಗಿರುವ ಕಪ್ಪು ಕಲೆಯನ್ನು ತೆಗೆದುಹಾಕಲು ಸೌತೆಕಾಯಿ ಸಹಕಾರಿ. ಸೌತೆಕಾಯಿಯಲ್ಲಿ ಚರ್ಮದ ಸೌಂದರ್ಯ ಹೆಚ್ಚಿಸುವ ಗುಣವಿದೆ. ಸೌತೆಕಾಯಿಯ ಎರಡು ದಪ್ಪ ಹೋಳುಗಳನ್ನು ಕತ್ತರಿಸಿ ಫ್ರಿಜ್ ನಲ್ಲಿ 30 ನಿಮಿಷಗಳ ಕಾಲ ಇರಿಸಿ. ನಂತರ ಸೌತೆಕಾಯಿ ಹೋಳುಗಳನ್ನು 10 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ವಾರಕ್ಕೆ ಮೂರ್ನಾಲ್ಕು ದಿನ ಹೀಗೆ ಮಾಡ್ತಾ ಬಂದಲ್ಲಿ ಕಣ್ಣಿನ ಕಪ್ಪು ಕಲೆ ಮಾಯವಾಗುತ್ತದೆ.
ರೋಸ್ ವಾಟರ್ : ರೋಸ್ ವಾಟರ್ ಕೂಡ ಚರ್ಮಕ್ಕೆ ತೇವಾಂಶವನ್ನು ಒದಗಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ರಿಫ್ರೆಶ್ ಮಾಡುತ್ತದೆ. ಹತ್ತಿಯ ತುಂಡನ್ನು ಗುಲಾಬಿ ನೀರಿನಲ್ಲಿ ನೆನೆಸಿ ಅದನ್ನು ಕಣ್ಣಿನ ಮೇಲೆ ಇಡಬೇಕು. 15 ನಿಮಿಷಗಳ ಕಾಲ ಕಣ್ಣಿನ ಮೇಲಿಟ್ಟು ನಂತ್ರ ತೊಳೆದುಕೊಳ್ಳಬೇಕು.
ಆಲೂಗಡ್ಡೆ : ಆಲೂಗಡ್ಡೆ ಕೂಡ ಕಣ್ಣಿನ ಸುತ್ತಲು ಕಾಣಿಸಿಕೊಳ್ಳುವ ಕಪ್ಪು ಕಲೆ ಹೋಗಲಾಡಿಸುವ ಶಕ್ತಿ ಹೊಂದಿದೆ. ವಿಟಮಿನ್-ಸಿ ಇದ್ರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಆಲೂಗಡ್ಡೆಯನ್ನು ಹೂಳುಗಳಾಗಿ ಕತ್ತರಿಸಿ ಅದನ್ನು ಕಣ್ಣಿನ ಮೇಲೆ ಇಡಬೇಕು. 10 ನಿಮಿಷದ ನಂತ್ರ ಕಣ್ಣುಗಳನ್ನು ಸ್ವಚ್ಛಗೊಳಿಸಬೇಕು.
ನಿಂಬೆ ರಸ ಮತ್ತು ಸೌತೆಕಾಯಿ : ಸೌತೆಕಾಯಿಯನ್ನು ಮಾತ್ರವಲ್ಲ, ನಿಂಬೆ ರಸ ಕೂಡ ಕಪ್ಪು ಕಲೆ ತೆಗೆಯುವುದ್ರಲ್ಲಿ ಸಹಕಾರಿ. ನಿಂಬೆ ರಸ ಮತ್ತು ಸೌತೆಕಾಯಿ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಹತ್ತಿಯ ಸಹಾಯದಿಂದ ಕಣ್ಣುಗಳ ಕೆಳಗೆ ಹಚ್ಚಬೇಕು. 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಬೇಕು.
ಟೊಮೆಟೊ : ಟೋಮೆಟೊ ಕೂಡ ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ನಿಂಬೆ ರಸ ಮತ್ತು ಟೊಮೆಟೊ ರಸವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ, ಹತ್ತಿಯ ಸಹಾಯದಿಂದ ಕಪ್ಪು ಕಲೆ ಮೇಲೆ ಹಚ್ಚಬೇಕು. 10 ನಿಮಿಷ ಬಿಟ್ಟು ಸ್ವಚ್ಛಗೊಳಿಸಬೇಕು. ನಿಯಮಿತವಾಗಿ ಇದನ್ನು ಮಾಡುತ್ತ ಬಂದಲ್ಲಿ ಕಣ್ಣಿನ ಕೆಳಗಿರುವ ಕಲೆ ಮಾಯವಾಗುತ್ತದೆ.