ತಲೆಹೊಟ್ಟು ಎಲ್ಲರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ ಬಹು ಮುಖ್ಯ ಕಾರಣವಾಗುತ್ತದೆ. ತಲೆಹೊಟ್ಟಿನ ಕಾರಣ ಕೆಲವೊಮ್ಮೆ ಮುಜುಗರಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಲೆಹೊಟ್ಟಿಗೆ ಮನೆಯಲ್ಲಿರುವ ವಸ್ತು ಬಳಸಿ ಮದ್ದು ತಯಾರಿಸಬಹುದು.
ಮೆಂತ್ಯ : ತಲೆಹೊಟ್ಟಿನಿಂದ ಮುಕ್ತಿ ಪಡೆಯಲು ಎರಡು ಚಮಚ ಮೆಂತ್ಯೆ ಕಾಳನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಹಾಕಿ. ಬೆಳಿಗ್ಗೆ ಎದ್ದ ನಂತ್ರ ಇದನ್ನು ಮಿಕ್ಸಿ ಮಾಡಿ ಮಿಶ್ರಣವನ್ನು ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿದ್ರೆ ತಲೆಹೊಟ್ಟು ಕಡಿಮೆಯಾಗಲಿದೆ. ವಾರಕ್ಕೆ 2-3 ಬಾರಿ ಈ ಕೆಲಸ ಮಾಡಬೇಕಾಗುತ್ತದೆ.
ಒಳ್ಳೆಯ ಮೊಸರಿನಲ್ಲಿ ತಲೆ ಹೊಟ್ಟು ನಿವಾರಿಸುವ ಶಕ್ತಿ ಇದೆ. ಮೊಸರನ್ನು ತಲೆಗೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ.
ಬೀಟರೋಟ್ ಸಿಪ್ಪೆ ತೆಗೆದು ಸಣ್ಣದಾಗಿ ಕಟ್ ಮಾಡಿ ಬಿಸಿನೀರಿನಲ್ಲಿ ಬೇಯಿಸಿ. ನಂತ್ರ ಆ ನೀರಿನಿಂದ ತಲೆಯ ಬುಡವನ್ನು ಮಸಾಜ್ ಮಾಡಿ. ರಾತ್ರಿ ತಲೆಗೆ ಮಸಾಜ್ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡಿ. ಪದೇ ಪದೇ ಇದನ್ನು ಬಳಸಿದ್ರೆ ಬೇಗ ತಲೆಹೊಟ್ಟು ಕಡಿಮೆಯಾಗಲಿದೆ.
ಒಂದು ಚಮಚ ಕಡಲೇ ಹಿಟ್ಟಿಗೆ ಮೊಸರು ಸೇರಿಸಿ ಮಿಕ್ಸ್ ಮಾಡಿ. ಅದನ್ನು ತಲೆಗೆ ಹಚ್ಚಿಕೊಂಡು 10 ನಿಮಿಷ ಬಿಡಿ. ನಂತ್ರ ತಲೆ ಸ್ನಾನ ಮಾಡಿ.
ಅಲೋವೇರಾ ಜೆಲ್ ತಲೆಗೆ ಹಚ್ಚಿಕೊಂಡು ಕೆಲ ಸಮಯ ನಂತ್ರ ತಲೆ ಸ್ನಾನ ಮಾಡಿ. ತಲೆ ಹೊಟ್ಟು ಕಡಿಮೆಯಾಗುವ ಜೊತೆಗೆ ಹೊಳಪು ಬರುತ್ತದೆ.