ಕೆಮ್ಮು ಸಾಮಾನ್ಯ ಸಮಸ್ಯೆ. ಆದ್ರೆ ಒಮ್ಮೆ ಅಂಟಿಕೊಂಡ್ರೆ ಹೋಗೋದು ನಿಧಾನ. ಕೆಮ್ಮು ಎರಡು ವಾರಕ್ಕಿಂತ ಹೆಚ್ಚು ಕಾಲ ಕಾಡಿದ್ರೆ ಚಿಂತೆ ಶುರುವಾಗುತ್ತದೆ. ನಿಮಗೂ ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು ಕಾಡಿದ್ರೆ ತಕ್ಷಣ ವೈದ್ಯರ ಬಳಿ ಹೋಗಿ. ಕೆಮ್ಮು ಶುರುವಾಗ್ತಿದ್ದಂತೆ ಮಾರುಕಟ್ಟೆಯಲ್ಲಿ ಸಿಗುವ ಔಷಧಿ ತಂದು ಕುಡಿಯುವವರ ಸಂಖ್ಯೆ ಹೆಚ್ಚು. ಆದ್ರೆ ಈ ಸಿರಪ್ ಗಳಿಗಿಂತ ಮನೆ ಮದ್ದು ಬೆಸ್ಟ್.
ಹಸುವಿನ ಹಾಲಿನಿಂದ ಮಾಡಿದ ತುಪ್ಪ ಹಾಗೂ ಕರಿಮೆಣಸನ್ನು ಹಾಕಿ ಸಣ್ಣ ಜ್ವಾಲೆಯಲ್ಲಿ ಬಿಸಿ ಮಾಡಿ. ನಂತ್ರ ಇದಕ್ಕೆ ಸಕ್ಕರೆ ಹುಡಿಯನ್ನು ಹಾಕಿ ಕರಿಮೆಣಸನ್ನು ತೆಗೆದು ತುಪ್ಪ, ಸಕ್ಕರೆಯನ್ನು ತಿನ್ನಿ. ಇದನ್ನು 2-3 ದಿನ ಸೇವನೆ ಮಾಡುವುದ್ರಿಂದ ಕೆಮ್ಮು ಕಡಿಮೆಯಾಗುತ್ತದೆ.
ಒಣ ಶುಂಠಿಯನ್ನು ಹಾಲಿಗೆ ಹಾಕಿ ಕುದಿಸಿ. ರಾತ್ರಿ ಮಲಗುವ ಮುನ್ನ ಈ ಹಾಲನ್ನು ಕುಡಿದು ಮಲಗಿ. ಕೆಲ ದಿನ ಹೀಗೆ ಮಾಡಿದ್ರೆ ಕೆಮ್ಮು ಕಡಿಮೆಯಾಗುತ್ತದೆ.
ಒಣದ್ರಾಕ್ಷಿ ಹಾಗೂ ಜೇನುತುಪ್ಪವನ್ನು ಮಿಕ್ಸ್ ಮಾಡಿ ಪ್ರತಿದಿನ ಸೇವಿಸಿ. ಇದು ಕೂಡ ಕೆಮ್ಮಿಗೆ ಒಳ್ಳೆಯ ಮನೆ ಮದ್ದು.
ಜೇನು ತುಪ್ಪಕ್ಕೆ ತ್ರಿಫಲಾವನ್ನು ಬೆರೆಸಿ ಎರಡು ದಿನ ಸೇವನೆ ಮಾಡಿದ್ರೆ ಕೆಮ್ಮು ಮಾಯ.
ತುಳಸಿ, ಶುಂಠಿ ಹಾಗೂ ಕಾಳು ಮೆಣಸಿನ ಟೀ ತಯಾರಿಸಿ. ಇದು ಉಗುರು ಬೆಚ್ಚಗಿರುವಾಗಲೇ ಕುಡಿಯಿರಿ. ಕೆಮ್ಮಿಗೆ ಇದು ಬೆಸ್ಟ್.