ಚಳಿಗಾಲದಲ್ಲಿ ತಪ್ಪದೇ ಎಲ್ಲರನ್ನು ಕಾಡೋ ಸಮಸ್ಯೆ ಅಂದ್ರೆ ನೆಗಡಿ. ಒಬ್ಬರಿಂದ ಮತ್ತೊಬ್ಬರಿಗೆ ಹರಡೋ ನೆಗಡಿಗೆ ವೈರಾಣುಗಳು ಕಾರಣವೆಂದು ಹೇಳಲಾಗಿದೆ.
ನೆಗಡಿಯಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ವೈರಾಣುಗಳು ಗಾಳಿಯಲ್ಲಿ ಹರಡಿ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತದೆ. ನೆಗಡಿ ಸಾಮಾನ್ಯವಾಗಿ 4 ರಿಂದ 6 ದಿನಗಳೊಳಗೆ ತನ್ನಷ್ಟಕ್ಕೆ ತಾನೇ ಗುಣವಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿಯು ವೈರಾಣುವಿನ ವಿರುದ್ಧ ಹೋರಾಡಲು ಪ್ರತಿಬಂಧಕಗಳನ್ನು ಸೃಷ್ಟಿಸಿ ದೇಹದಿಂದ ಹೊರಹಾಕುತ್ತದೆ. ಆದ್ರೂ ನೆಗಡಿಯ ಕಿರಿಕಿರಿಯಿಂದ ದೂರವಿರಲು ಕೆಲ ಮನೆ ಮದ್ದುಗಳನ್ನು ಪಾಲಿಸಿ.
* ಹುಳಿ ಮೊಸರು, ಕರಿದ ಆಹಾರ, ತಂಪು ಪಾನೀಯ ಕಡಿಮೆಗೊಳಿಸಿ.
* ಒಂದು ಲೋಟ ಬೆಚ್ಚಗಿನ ಹಾಲಿಗೆ ಅರಿಶಿನ ಮತ್ತು ಬೆಲ್ಲವನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೆ ಕಫ ಮತ್ತು ನೆಗಡಿ ಕಮ್ಮಿಯಾಗುತ್ತದೆ.
* ದಿನಕ್ಕೆ 2 ರಿಂದ 3 ಬಾರಿ ಹತ್ತು ನಿಮಿಷಗಳ ಕಾಲ ಮುಖಕ್ಕೆ ಹಬೆಯನ್ನು ತೆಗೆದುಕೊಳ್ಳಬೇಕು.
* ತುಳಸಿ, ಶುಂಠಿ ಕಷಾಯ ಸೇವಿಸಬೇಕು.
* ದಾಲ್ಚಿನ್ನಿ, ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇವಿಸಿದರೆ ನೆಗಡಿ ಮತ್ತು ಕಫ ನಿವಾರಣೆಯಾಗುತ್ತದೆ.
* ಬೆಳ್ಳಿಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.