ಹೆಚ್ಚಿನ ಜನರು ಮುಖ, ಕೈ ಹಾಗೂ ಕಾಲಿನ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡ್ತಾರೆ. ಬೆನ್ನು, ಕುತ್ತಿಗೆಯನ್ನು ಮರೆತು ಬಿಡ್ತಾರೆ. ಸೂರ್ಯನ ಕಿರಣದಿಂದ ಕುತ್ತಿಗೆ ಹಾಗೂ ಬೆನ್ನು ಕಪ್ಪಾಗಿರುತ್ತದೆ. ಚೆಂದದ, ಡೀಪ್ ಬಟ್ಟೆ ಧರಿಸಿದಾಗ ಕುತ್ತಿಗೆ ಹಾಗೂ ಬೆನ್ನಿನ ಕಪ್ಪು ಕಲೆ ಸೌಂದರ್ಯವನ್ನು ಹಾಳು ಮಾಡುತ್ತದೆ.
ಈ ಕಪ್ಪು ಕಲೆ ಹೋಗಲಾಡಿಸಲು ದುಬಾರಿ ಹಣ ನೀಡಿ ಬ್ಯೂಟಿ ಪಾರ್ಲರ್ ಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಹಚ್ಚಿ ಕಪ್ಪಾದ ಕುತ್ತಿಗೆಯನ್ನು ಬೆಳ್ಳಗೆ ಮಾಡಿಕೊಳ್ಳಬಹುದು.
ಸೌತೆಕಾಯಿ : ಸೌತೆಕಾಯಿಯನ್ನು ಹೆಚ್ಚಾಗಿ ಸಲಾಡ್ ಗೆ ಬಳಸ್ತೇವೆ. ಆದ್ರೆ ಈ ಸೌತೆಕಾಯಿ ರಸ ಕಪ್ಪು ಕಲೆ ಹೋಗಲಾಡಿಸುತ್ತದೆ. ಸೌತೆಕಾಯಿ ತುರಿದು ಅಥವಾ ರಸ ಮಾಡಿ ಅದನ್ನು ಕಪ್ಪು ಕಲೆಯಿರುವ ಜಾಗಕ್ಕೆ ಹಚ್ಚಬೇಕು. ನಿಧಾನವಾಗಿ ಕೈನಿಂದ ಮಸಾಜ್ ಮಾಡಬೇಕು.
ಕಿತ್ತಳೆ ಹಣ್ಣಿನ ಸಿಪ್ಪೆ : ಕಿತ್ತಳೆ ಹಣ್ಣಿನ ಸಿಪ್ಪೆ ತೆಗೆದು ಅದನ್ನು ಒಣಗಿಸಿ ಪುಡಿ ಮಾಡಿ. ಈ ಪುಡಿಯನ್ನು ಹಾಲಿನ ಜೊತೆ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ಕುತ್ತಿಗೆ ಹಾಗೂ ಬೆನ್ನಿಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತೊಳೆದುಕೊಳ್ಳಿ.
ಮೊಸರು : ಚರ್ಮದ ಕಪ್ಪು ಕಲೆ ತೆಗೆಯಲು ಮೊಸರು ಸಹಾಯ ಮಾಡುತ್ತದೆ. ಅದ್ರಲ್ಲಿರುವ ನೈಸರ್ಗಿಕ ಗುಣ ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಮೊಸರನ್ನು ಕುತ್ತಿಗೆಗೆ ಹಾಕಿ ಮಸಾಜ್ ಮಾಡಿ ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ.
ಟೋಮೋಟೋ ಮತ್ತು ಜೇನು : ಟೋಮೋಟೋ ರಸ ಹಾಗೂ ಜೇನು ತುಪ್ಪವನ್ನು ಬೆರೆಸಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಅದನ್ನು 20 ನಿಮಿಷಗಳ ಕಾಲ ಕುತ್ತಿಗೆಗೆ ಹಚ್ಚಿ ಮಸಾಜ್ ಮಾಡಿ. ಒಂದು ವಾರಗಳ ಕಾಲ ಈ ಮದ್ದು ಬಳಸಿದ್ರೆ ಕಪ್ಪು ಕಲೆ ಮಾಯವಾಗುತ್ತದೆ.
ಅಡುಗೆ ಸೋಡಾ : ಅಡುಗೆ ಸೋಡಾ ಜೊತೆ ನೀರು ಬೆರಸಿ ಮಿಶ್ರಣ ತಯಾರಿಸಿಕೊಳ್ಳಿ. ಅದನ್ನು ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಗುಲಾಬಿ ನೀರು ಹಾಕಿ ಸ್ವಚ್ಛಗೊಳಿಸಿ.