ಸದೃಢ ಮತ್ತು ಉತ್ತಮ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಮಾತ್ರ ಮುಖ್ಯವಲ್ಲ, ಆರೋಗ್ಯಕರ ಜೀವನ ಶೈಲಿ ಬಹಳ ಮುಖ್ಯ. ನೀವು ಅನುಸರಿಸುವ ಕೆಲವೊಂದು ಅಭ್ಯಾಸಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಕೆಟ್ಟ ಅಭ್ಯಾಸಗಳನ್ನು ಬದಲಿಸಿಕೊಳ್ಳುವ ಶಪಥ ಮಾಡಿ.
ಸಮಯಕ್ಕೆ ಸರಿಯಾಗಿ ಕೆಲಸವನ್ನು ಮುಗಿಸಿ. ಹಾಗೆ ಕಚೇರಿ ಕೆಲಸವನ್ನು ಮನೆಗೆ ತರಬೇಡಿ. ಅತಿಯಾದ ಕೆಲಸ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆರೋಗ್ಯವಾಗಿರಬೇಕೆಂದ್ರೆ ಮಿತಿ ಮೀರಿ ಕೆಲಸ ಮಾಡಬೇಡಿ.
ಕೆಲಸದ ಒತ್ತಡದಲ್ಲಿ ಹಾಗೂ ಕೆಟ್ಟ ಜೀವನಶೈಲಿಯಿಂದಾಗಿ ಜನರು ಬೆಳಗಿನ ಉಪಹಾರ ಬಿಡ್ತಾರೆ. ಬೆಳಿಗ್ಗೆ ತಡವಾಗಿ ಏಳುವ ಕಾರಣ ಕೆಲಸಕ್ಕೆ ಹೋಗಲು ಸಮಯವಾಗುತ್ತೆ ಎಂಬ ಕಾರಣ ಹೇಳಿ ಉಪಹಾರ ಬಿಡುವವರ ಸಂಖ್ಯೆ ಹೆಚ್ಚಿದೆ. ಆರೋಗ್ಯ ಬಯಸುವವರು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡಿ.
ಅನಾರೋಗ್ಯಕ್ಕೆ ಇನ್ನೊಂದು ಕಾರಣ ನಕಾರಾತ್ಮಕ ಮನಸ್ಸು. ನಿಮ್ಮ ಆಲೋಚನೆಗಳು ಕೆಟ್ಟದಾಗಿದ್ದರೆ ಮನಸ್ಸು, ದೇಹ ಎರಡೂ ಹಾಳಾಗುತ್ತದೆ. ಹಾಗಾಗಿ ಮನಸ್ಸನ್ನು ಒತ್ತಡದಿಂದ ಮುಕ್ತವಾಗಿರಿಸಬೇಕು. ಖಿನ್ನತೆಯಿಂದ ದೂರವಾಗಬೇಕು. ಸಕಾರಾತ್ಮಕ ಆಲೋಚನೆಗಳನ್ನು ಮಾಡಬೇಕು. ನಕಾರಾತ್ಮಕ ಆಲೋಚನೆ ಹರಡುವವರಿಂದ ದೂರವಿರಬೇಕು.
ಹಾಗೇ ಜಂಕ್ ಫುಡ್ ಗಳಿಂದ ದೂರವಿರಿ. ಇದು ನಿಮ್ಮ ಬೊಜ್ಜು ಹೆಚ್ಚಿಸುವ ಜೊತೆಗೆ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಆಹಾರ ಸೇವನೆ ಮಾಡುವ ಶಪಥ ಮಾಡಿ. ಆದಷ್ಟು ಮನೆಯಲ್ಲಿ ತಯಾರಿಸಿದ ಶುದ್ಧ, ಆರೋಗ್ಯಕರ ಆಹಾರ ಸೇವನೆ ಮಾಡಿ.
ದೇಹ ಹಾಗೂ ಮನಸ್ಸು ಶುದ್ಧವಾಗಿರಬೇಕೆಂದ್ರೆ ವ್ಯಾಯಾಮ ಅತ್ಯಗತ್ಯ. ಹಾಗಾಗಿ ಪ್ರತಿ ದಿನ ವ್ಯಾಯಾಮಕ್ಕೆ, ಯೋಗಕ್ಕೆ ಸ್ವಲ್ಪ ಸಮಯ ಮೀಸಲಿಡಿ. ಕನಿಷ್ಠ 15 ನಿಮಿಷವಾದ್ರೂ ವ್ಯಾಯಾಮ ಮಾಡಿ.
ಬಾದಾಮಿಯಲ್ಲಿ ಪ್ರೋಟೀನ್, ಫೈಬರ್ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕಾರಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಾಗಾಗಿ ಪ್ರತಿ ದಿನ ಬಾದಾಮಿ ಸೇವನೆ ಮಾಡಿ.
ಆರೋಗ್ಯಕರ ವ್ಯಕ್ತಿಗೆ 8 ಗಂಟೆಯ ನಿದ್ರೆ ಬೇಕು. ಮಕ್ಕಳು 11-12 ಗಂಟೆ ಮಲಗಬೇಕು. ಕೆಲಸದ ಒತ್ತಡದಲ್ಲಿ ಕೆಲವರು 5 ಗಂಟೆ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಟಿವಿ, ಮೊಬೈಲ್ ನೋಡಿ ಸಮಯ ಹಾಳು ಮಾಡುವ ಬದಲು ನಿದ್ರೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ.