ಹೆಚ್ಚಿನವರು ತಲೆ ಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಕಿರಿಕಿರಿ ಜತೆಗೆ ಮುಜುಗರವನ್ನು ಕೂಡ ಉಂಟು ಮಾಡುತ್ತದೆ.
ತಲೆ ಕೂದಲಿನ ಸರಿಯಾಗಿ ಕಾಳಜಿ ವಹಿಸದೇ ಇರುವುದು, ಕೆಮಿಕಲ್ ಯುಕ್ತ ಶಾಂಪೂಗಳ ಬಳಕೆ, ಆಹಾರ ಕ್ರಮದಿಂದ ಈ ತಲೆ ಹೊಟ್ಟಿನ ಸಮಸ್ಯೆ ಉಂಟಾಗುತ್ತದೆ. ಇದನ್ನು ನಿವಾರಿಸಿಕೊಳ್ಳುವುದಕ್ಕೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್.
5ರಿಂದ 6 ಹನಿಗಳಷ್ಟು ಟೀ ಟ್ರೀ ಆಯಿಲ್ ಅನ್ನು ನೀವು ಬಳಸುವ ಶಾಂಪೂವಿನೊಂದಿಗೆ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಳ್ಳಿ ಇದರಿಂದ ತಲೆಹೊಟ್ಟು ನಿಧಾನಕ್ಕೆ ಕಡಿಮೆಯಾಗುತ್ತದೆ.
ಇನ್ನು ನಿಮ್ಮ ಅಡುಗೆ ಮನೆಯಲ್ಲಿರುವ ಬೇಕಿಂಗ್ ಸೋಡಾ ಕೂಡ ನಿಮ್ಮ ತಲೆ ಹೊಟ್ಟಿಗೆ ಉತ್ತಮವಾದ ಔಷಧಿಯಾಗಿದೆ. 3 ಟೇಬಲ್ ಸ್ಪೂನ್ ನಷ್ಟು ಬೇಕಿಂಗ್ ಸೋಡ ತೆಗೆದುಕೊಳ್ಳಿ. ನಿಮ್ಮ ತಲೆಯನ್ನು ಸ್ವಲ್ಪ ಒದ್ದೆ ಮಾಡಿಕೊಂಡು ಇದರಿಂದ ಮಸಾಜ್ ಮಾಡಿ. ಯಾವುದೇ ಶಾಂಪೂವನ್ನು ಉಪಯೋಗಿಸದೇ ತಲೆಯನ್ನು ತೊಳೆದುಕೊಳ್ಳಿ.
ಕಾಲು ಕಪ್ ನಷ್ಟು ವಿನೇಗರ್ ಗೆ ಕಾಲು ಕಪ್ ನಷ್ಟು ನೀರು ಸೇರಿಸಿ ಒಂದು ಸ್ಪ್ರೇ ಬಾಟೆಲ್ ಗೆ ಹಾಕಿ. ನಂತರ ನಿಮ್ಮ ತಲೆಗೆ ಈ ಮಿಶ್ರಣವನ್ನು ಸ್ಪ್ರೇ ಮಾಡಿಕೊಳ್ಳಿ. ಆಮೇಲೆ ಒಂದು ಟವೆಲ್ ಅನ್ನು ನಿಮ್ಮ ತಲೆಗೆ ಸುತ್ತಿಕೊಳ್ಳಿ. 15 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ. ವಾರದಲ್ಲಿ ಎರಡು ಬಾರಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಒಂದು ಕಪ್ ನೀರಿಗೆ ಒಂದು ಲಿಂಬೆ ಹಣ್ಣಿನ ರಸವನ್ನು ಹಿಂಡಿ. ನಂತರ ಈ ನೀರಿನಿಂದ ನಿಮ್ಮ ತಲೆಯನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ½ ಗಂಟೆ ಬಿಟ್ಟು ಸ್ನಾನ ಮಾಡಿ. ಇದು ಕೂಡ ತಲೆ ಹೊಟ್ಟನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.