ಕಚೇರಿಯಲ್ಲಿ ಕೆಲಸ ಮಾಡಿ ಸುಸ್ತಾಗಿದೆಯೇ, ತಲೆ ನೋವೇ, ಹಾಳು ಮೂಳು ತಿಂದು ಹೊಟ್ಟೆ ನೋವು ಕಾಣಿಸಿಕೊಂಡಿದೆಯೇ. ಎಲ್ಲದಕ್ಕೂ ಪೇನ್ ಕಿಲ್ಲರ್ ಪರಿಹಾರ ಎಂದುಕೊಂಡಿದ್ದೀರಾ, ಇದೇ ನೀವು ಮಾಡುತ್ತಿರುವ ಮೊದಲ ತಪ್ಪು. ಸಣ್ಣ ಪುಟ್ಟ ಸಮಸ್ಯೆಗೂ ನೋವು ನಿವಾರಕ ಮಾತ್ರೆಗಳನ್ನು ತಿನ್ನುವುದರಿಂದ ಹಲವು ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ನೋವು ನಿವಾರಕ ಮಾತ್ರೆಗಳು ದೇಹದ ಹಲವು ಭಾಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು, ಕಿಡ್ನಿ, ಲಿವರ್ ವೈಫಲ್ಯದಂಥ ಸಮಸ್ಯೆಗಳೂ ಕಾಣಿಸಿಕೊಂಡಾವು.
ಪ್ಯಾರಸಿಟಮಲ್ ಮಾತ್ರೆ ಹೆಚ್ಚು ಸೇವಿಸುವುದರಿಂದ ಲಿವರ್ ಗೆ ಸಂಬಂಧಿಸಿದ ಹಾಗೂ ಅಲರ್ಜಿಯ ಲಕ್ಷಣಗಳು ಕಂಡು ಬಂದಾವು, ವೈದ್ಯರ ಸಲಹೆ ಇಲ್ಲದೆ ಇದನ್ನು ತಿನ್ನುವುದು ಒಳ್ಳೆಯದಲ್ಲ.
ಇನ್ನು ಕೆಲವು ಮಾತ್ರೆಗಳನ್ನು ನಿರಂತರವಾಗಿ ಸೇವಿಸುವುದರಿಂದ ಡಿಪ್ರೆಶನ್, ಮೂತ್ರದಲ್ಲಿ ಸೋಂಕು, ವಾಂತಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಂಡಾವು. ಕಿಡ್ನಿ ಹಾಗೂ ಲಿವರ್ ಸಂಬಂಧಿ ಸಮಸ್ಯೆ ಇರುವವರು, ಮಧುಮೇಹ, ರಕ್ತದೊತ್ತಡ ಸಮಸ್ಯೆ ಇರುವವರು ವೈದ್ಯರ ಸಲಹೆ ಇಲ್ಲದೆ ಇಂಥ ಯಾವುದೇ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ.