ರಾಜ್ಯದಲ್ಲಿ ಉಂಟಾಗಿರುವ ಕೊರೊನಾ ಲಸಿಕೆ ಅಭಾವದ ವಿರುದ್ಧ ಹಾಸನದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜನರಿಗೆ ಆದಷ್ಟು ಬೇಗ ಲಸಿಕೆಯನ್ನ ನೀಡಿ ನಿಮ್ಮ ಹೆಸರನ್ನ ಉಳಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದ ಪ್ರತಿಯೊಬ್ಬ ಜನತೆಗೂ ಆದಷ್ಟು ಬೇಗ ಕೊರೊನಾ ಲಸಿಕೆಯನ್ನ ನೀಡಿ. ಮಕ್ಕಳು ಹಾಗೂ ಯುವಕರಿಗೆ ಕೊರೊನಾ ಲಸಿಕೆ ಅಭಿಯಾನವನ್ನ ಸೂಕ್ತವಾಗಿ ಆರಂಭಿಸಿ. ನಿಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ ಜನರ ಜೀವ ಉಳಿಸಿ. ಜನರಿಗೆ ಕೊರೊನಾ ಲಸಿಕೆಯನ್ನ ನೀಡಿ ನಿಮ್ಮ ಹೆಸರನ್ನ ಉಳಿಸಿಕೊಳ್ಳಿ ಎಂದು ಡಿಕೆಶಿ ಹೇಳಿದ್ದಾರೆ.
ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ವಿಚಾರವಾಗಿಯೂ ಮಾತನಾಡಿದ ಅವರು, ಈ ಪ್ರಕರಣವನ್ನ ರಾಜ್ಯ ಸರ್ಕಾರ ಕೈಬಿಟ್ಟರೂ ಸಹ ನಾವು ಬಿಡೋದಿಲ್ಲ. ರಮೇಶ್ ಜಾರಕಿಹೊಳಿ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಸಿಡಿ ಪ್ರಕರಣದ ವಿಚಾರವಾಗಿ ಸಿಎಂ ಹಾಗೂ ಗೃಹ ಸಚಿವರು ಬೇರೆ ಬೇರೆ ಹೇಳಿಕೆಯನ್ನ ನೀಡ್ತಿದ್ದಾರೆ. ರಾಜ್ಯ ಸರ್ಕಾರ ರಮೇಶ್ ಜಾರಕಿಹೊಳಿಯನ್ನ ರಕ್ಷಿಸೋಕೆ ಹೊರಟಿದೆ. ಆದರೆ ನಾವು ಈ ಪ್ರಕರಣದ ವಿರುದ್ಧ ನ್ಯಾಯಕ್ಕಾಗಿ ರಾಜ್ಯವ್ಯಾಪಿ ಹೋರಾಟ ಮಾಡಲಿದ್ದೇವೆ ಎಂದು ಹೇಳಿದ್ರು.