ಬೆಳಗಾವಿಯಿಂದ ಸುಮಾರು 98 ಕಿಲೋ ಮೀಟರ್ ದೂರದಲ್ಲಿರುವ, ಸವದತ್ತಿ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ.
ಧಾರವಾಡದಿಂದ ಸವದತ್ತಿ ಸುಮಾರು 35 ಕಿಲೋ ಮೀಟರ್ ದೂರದಲ್ಲಿರುವ ಸವದತ್ತಿಯಿಂದ 5 ಕಿಲೋ ಮೀಟರ್ ಅಂತರದಲ್ಲಿ ಯಲ್ಲಮ್ಮನ ಗುಡ್ಡವಿದೆ.
ಈ ಗುಡ್ಡದ ಮೇಲೆ ಇರುವ ಕೊಳ್ಳದಲ್ಲಿ ಪ್ರಾಚೀನ ಕಾಲದ ಭವ್ಯ ದೇವಾಲಯ ಕಾಣಬಹುದು. ತಾಯಿ ಯಲ್ಲಮ್ಮ ದೇವಿಯ ದರ್ಶನ ಪಡೆಯಬಹುದಾಗಿದೆ.
ರೇಣುಕಾ ಯಲ್ಲಮ್ಮ ದೇವಾಲಯ ಸಮಿತಿಯಿಂದ ಭಕ್ತರ ಅನುಕೂಲಕ್ಕಾಗಿ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ. ಕೋಟೆ, ಪಾರ್ಕ್ ಮೊದಲಾದ ನೋಡಬಹುದಾದ ಸ್ಥಳಗಳು ಇಲ್ಲಿವೆ. ಭಕ್ತರು, ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಾರೆ.
ಸವದತ್ತಿಯಂತೆಯೇ ಚಿಂಚಲಿಯಲ್ಲಿಯೂ ಹೆಚ್ಚಿನ ಭಕ್ತರು ಸೇರುತ್ತಾರೆ. ಮಾಯಕ್ಕ ದೇವಿಯ ದರ್ಶನ ಪಡೆಯುತ್ತಾರೆ. ಕೃಷ್ಣಾ ನದಿಯ ತಟದಲ್ಲಿರುವ ಚಿಂಚಲಿಯಲ್ಲಿ ಪುರಾತನ ದೇವಾಲಯವಿದೆ. ರಾಯಭಾಗಕ್ಕೆ ರೈಲಿನ ಸಂಪರ್ಕ ಕೂಡ ಇದೆ.
ಇದರಂತೆಯೇ ಸವದತ್ತಿ ಮತ್ತು ರಾಮದುರ್ಗ ರಸ್ತೆಯಲ್ಲಿ ಶಿರಸಂಗಿ ಇದ್ದು, ಕಾಳಿಕಾದೇವಿಯ ಪುಣ್ಯಸ್ಥಳವಾಗಿದೆ. ಶಿರಸಂಗಿಯ ಬಸ್ ನಿಲ್ದಾಣದಿಂದ ಸುಮಾರು 3-4 ಕಿಲೋ ಮೀಟರ್ ಒಳಗೆ ಹೋದರೆ ಬೆಟ್ಟದ ತಡಿಯಲ್ಲಿ ಕಾಳಿಕಾ ದೇವಿಯ ದೇವಾಲಯವಿದೆ.