
ಫ್ರೆಂಚ್ ರಾಜಮನೆತನದ ಅಧಿಕೃತ ಮನೆಯಾಗಿರುವ ಈ ಚಟೌಲೂಯಿಸ್ XIV ಭವನ ಮಾಲೀಕರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅಸಲಿಗೆ ಈ ಮನೆಯನ್ನ ಫ್ರೆಂಚ್ ರಾಜ ಅರಮನೆಯ ಅತಿರಂಜಿತ ಐಶಾರಾಮಿಗಳನ್ನು ಅನುಕರಿಸಲು ನಿರ್ಮಿಸಲಾಗಿತ್ತು. ಈಗ ಇದನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ಇದೇ ಮನೆಯ ಒಂದು ಭಾಗವನ್ನ ಅತಿಥಿಗಳ ತಂಗುವಿಕೆಗೆ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಈ ಮನೆಯ ಒಂದು ರಾತ್ರಿಯ ವೆಚ್ಚದ ಬಗ್ಗೆ ಎಲ್ಲೂ ಮಾಹಿತಿ ನೀಡಿಲ್ಲ.
ಸುಮಾರು 7,000 ಚದರ ಮೀಟರ್‌ಗಳಷ್ಟು ಹರಡಿರುವ ಈ ಮಹಲು 2015ರಲ್ಲಿ ಅಪರಿಚಿತ ಖರೀದಿದಾರರಿಂದ 275 ಮಿಲಿಯನ್ ಯುರೋಗಳೀಗೆ ಖರೀದಿಸಲಾಯಿತು ಅಂತ ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ, ಫಾರ್ಚೂನ್ ನಿಯತಕಾಲಿಕವು ಇದನ್ನು ವಿಶ್ವದ ಅತ್ಯಂತ ದುಬಾರಿ ಮನೆ ಅಂತ ಹೇಳಿದೆ. 2017ರಲ್ಲಿ, ದಿ ನ್ಯೂಯಾರ್ಕ್ ಟೈಮ್ಸ್, ಈ ಮಹಲು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಒಡೆತನದಲ್ಲಿತ್ತು ಎಂದು ಹೇಳಲಾಗುತ್ತಿದೆ.
ಚಟೌಲೂಯಿಸ್ XIV ಈ ಮನೆ ಒಳಗೆ ಎಂಟ್ರಿಯಾದ ತಕ್ಷಣ, ಇದು ವಿಶಾಲಾಕಾರದ ಅಕ್ವೇರಿಯಂನಂತೆ ಕಾಣಿಸುತ್ತೆ. ಬಿಳಿ ಚರ್ಮದಿಂದ ಮಾಡಿದ ಐಶಾರಾಮಿಯ ಸೋಫಾವನ್ನ ಕೋಟೆಯ ನಟ್ಟನಡುವೆ ಇರಿಸಲಾಗಿದೆ. ಇಲ್ಲಿ ಕ್ಲಬ್‌ಹೌಸ್, ಚಿನ್ನದ ಎಲೆಯ ಕಾರಂಜಿ ಹಾಗೂ ಸಿನೆಮಾ ಹಾಲ್‌ನ್ನ ನೋಡಬಹುದು. ಇವುಗಳ ಹೊರತಾಗಿ ಈ ಮಹಲಿನಲ್ಲಿ ನೀರೊಳಗಿನ ಗಾಜಿನ ಕೋಣೆಯೂ ಇದೆ. ಈ ಮನೆಯನ್ನ 2009ರಲ್ಲಿ19ನೇ ಶತಮಾನದ ಬುಲ್ಡೋಜ್ ಮಾಡುವ ಮೂಲಕ ನಿರ್ಮಿಸಲಾಗಿತ್ತು.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಭೇಟಿ ಮಾಡುವ ಮೊದಲು ಮೊಹಮ್ಮದ್ ಬಿನ್ ಸಲ್ಮಾನ್ ಈ ಭವನದಲ್ಲಿ ತಂಗಿದ್ದರು. ಆ ಸಮಯದಲ್ಲಿ, ಭದ್ರತಾ ದೃಷ್ಟಿಯಿಂದ ಈ ಮಹಲಿನ ಗೇಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಗಳನ್ನ ನಿಯೋಜಿಸಲಾಗಿತ್ತು ಎಂದು ಇಲ್ಲಿನ ಸುದ್ದಿ ಸಂಸ್ಥೆ ಎಎಫ್‌ಪಿಗೆ ವರದಿ ಮಾಡಿದೆ.