ರಿಯಾದ್: ಸೌದಿ ಅರೇಬಿಯಾ ತನ್ನ ಮೊದಲ ಆಲ್ಕೋಹಾಲ್ ಸ್ಟೋರ್ ಅನ್ನು ರಾಜಧಾನಿ ರಿಯಾದ್‌ನಲ್ಲಿ ತೆರೆಯಲು ತಯಾರಿ ನಡೆಸುತ್ತಿದೆ, ಇದು ಪ್ರತ್ಯೇಕವಾಗಿ ಮುಸ್ಲಿಮೇತರ ರಾಜತಾಂತ್ರಿಕರಿಗೆ ಮಾತ್ರ ಸೇವೆ ನೀಡಲಿದೆ.
ಗ್ರಾಹಕರು ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳಬೇಕು, ವಿದೇಶಾಂಗ ಸಚಿವಾಲಯದಿಂದ ಕ್ಲಿಯರೆನ್ಸ್ ಕೋಡ್ ಪಡೆಯಬೇಕು. ಮಾಸಿಕ ಕೋಟಾ ಅನ್ವಯ ಮದ್ಯ ಖರೀದಿಸಬೇಕು ಎಂದು ಹೇಳಲಾಗಿದೆ.
ಇಸ್ಲಾಂನಲ್ಲಿ ಮದ್ಯಪಾನ ನಿಷೇಧಿಸಿರುವುದರಿಂದ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕಾಗಿ ಅಲ್ಟ್ರಾ-ಕನ್ಸರ್ವೇಟಿವ್ ಮುಸ್ಲಿಂ ದೇಶವನ್ನು ತೆರೆಯಲು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದ ಆಡಳಿತದ ಈ ಕ್ರಮ ಒಂದು ಮೈಲಿಗಲ್ಲು ಆಗಿದೆ.
ಸೌದಿ ಅರೇಬಿಯಾದ ಕಾನೂನು
ಸೌದಿ ಅರೇಬಿಯಾವು ಮದ್ಯಪಾನದ ವಿರುದ್ಧ ಕಟ್ಟುನಿಟ್ಟಾದ ಕಾನೂನುಗಳನ್ನು ಹೊಂದಿದೆ. ನಿಯಮ ಉಲ್ಲಂಘಿಸುವವರು ಗಡೀಪಾರು, ದಂಡ ಅಥವಾ ಸೆರೆವಾಸದ ಶಿಕ್ಷೆಗೆ ಗುರಿಯಾಗುತ್ತಾರೆ. ವಲಸಿಗರಿಗೂ ಈ ನಿಯಮ ಅನ್ವಯವಾಗಲಿದ್ದು, ಅವರೂ ಸಹ ಗಡೀಪಾರು ಶಿಕ್ಷೆ ಎದುರಿಸುತ್ತಾರೆ. ಮದ್ಯವು ರಾಜತಾಂತ್ರಿಕ ಮೇಲ್ ಅಥವಾ ಕಪ್ಪು ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದೆ.
ಹೊಸ ಅಂಗಡಿಯು ರಿಯಾದ್‌ನ ರಾಜತಾಂತ್ರಿಕ ಕ್ವಾರ್ಟರ್ ನಲ್ಲಿದೆ, ರಾಯಭಾರಿಗಳು ಮತ್ತು ರಾಜತಾಂತ್ರಿಕರು ವಾಸಿಸುವ ನೆರೆಹೊರೆ ಮತ್ತು ಮುಸ್ಲಿಮೇತರರಿಗೆ ಸೇವೆ ಇರಲಿದೆ. ಸೌದಿ ಅರೇಬಿಯಾದಲ್ಲಿ ಲಕ್ಷಾಂತರ ವಲಸಿಗರು ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಏಷ್ಯಾ ಮತ್ತು ಈಜಿಪ್ಟ್‌ನ ಮುಸ್ಲಿಂ ಕಾರ್ಮಿಕರು. ಮುಂಬರುವ ವಾರಗಳಲ್ಲಿ ಸ್ಟೋರ್ ತೆರೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.