ಜಗತ್ತಿನ ಅತಿ ದೊಡ್ಡ ತೈಲ ರಫ್ತುದಾರ ಸೌದಿ ಅರೇಬಿಯಾ ಏಷ್ಯಾದ ತನ್ನ ಗ್ರಾಹಕರಿಗೆ ಪೂರೈಸುವ ಕಚ್ಛಾ ತೈಲದ ಬೆಲೆಯನ್ನು ಇಳಿಸಿದ್ದು, ವಾಯುವ್ಯ ಯೂರೋಪ್ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಅದೇ ಬೆಲೆ ಕಾಪಾಡಿಕೊಂಡಿದೆ.
ಕೊರೊನಾ ವೈರಸ್ನ ಡೆಲ್ಟಾವತಾರಿ ವಿರುದ್ಧ ಹೋರಾಡುತ್ತಿರುವ ಏಷ್ಯಾದ ದೇಶಗಳಲ್ಲಿ ಲಾಕ್ ಡೌನ್ ಇರುವ ನಡುವೆ ಇಂಧನದ ಬೇಡಿಕೆ ಸ್ವಲ್ಪ ತಗ್ಗಿರುವ ನಡುವೆ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಇದೇ ವೇಳೆ, ತೈಲೋತ್ಪಾದಕ ದೇಶಗಳ ಒಕ್ಕೂಟ (ಅಪೆಕ್), ಆಗಸ್ಟ್-ಡಿಸೆಂಬರ್ ನಡುವಿನ ಅವಧಿಯಲ್ಲಿ ಕಚ್ಛಾ ತೈಲದ ಉತ್ಪಾದನೆಯಲ್ಲಿ ನಾಲ್ಕು ಲಕ್ಷ ಬ್ಯಾರೆಲ್/ದಿನದಂತೆ ಏರಿಸಲು ನಿರ್ಧರಿಸಿವೆ.
ಎದೆ ನಡುಗಿಸುವಂತಿದೆ ಹೆಬ್ಬಾವು ಕಚ್ಚಿರುವ ವಿಡಿಯೋ
ಒಮಾನ್ನ ಡಿಎಂಇ ಹಾಗೂ ದುಬೈನ ಪ್ಲಾಟ್ಸ್ಗಳ ಸರಾಸರಿ ದರಕ್ಕಿಂತಲೂ $1.7/ಬ್ಯಾರೆಲ್ನಷ್ಟು ಬೆಲೆ ಇಳಿಕೆ ಮಾಡಿರುವ ಸೌರಿ ಅರಾಮ್ಕೋ ಕಳೆದ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಏಷ್ಯಾಗೆ ರಫ್ತು ಮಾಡುವ ಅಧಿಕೃತ ತೈಲ ಮಾರಾಟ ಬೆಲೆಯಲ್ಲಿ ಇಳಿಕೆ ಮಾಡಿದೆ. ಕಚ್ಛಾ ತೈಲದ ಬೆಲೆಯಲ್ಲಿ ಫೆಬ್ರವರಿ 2020ರಿಂದ ಇದೇ ಮೊದಲ ಬಾರಿಗೆ $3/ಬ್ಯಾರೆಲ್ನಷ್ಟು ವ್ಯತ್ಯಾಸ ಕಂಡುಬಂದಿದೆ.
ಅಕ್ಟೋಬರ್ ವರ್ಸಸ್ ಸೆಪ್ಟೆಂಬರ್ ಅವಧಿಯಲ್ಲಿ ಕಂಡುಬಂದಿರುವ $1.3/ಬ್ಯಾರೆಲ್ನಷ್ಟು ಬೆಲೆ ಇಳಿಕೆಯು ಕಳೆದೊಂದು ವರ್ಷದಿಂದ ಘಟಿಸಿರುವ ಅತಿ ದೊಡ್ಡ ಇಳಿಕೆಯಾಗಿದೆ. ದುಬೈ ನಿಗದಿಯಲ್ಲಿ ಬೆಲೆ ಇಳಿದ ಕಾರಣ ಸೌದಿ ಅರಾಮ್ಕೋ ಸಹ 20-40%ನಷ್ಟು ಬೆಲೆಯಲ್ಲಿ ಇಳಿಕೆ ಮಾಡಲಿದೆ ಎಂದು ಆಶಿಸುತ್ತಿದ್ದ ಖರೀದಿದಾರರಿಗೆ ಈ ಬೆಳವಣಿಗೆ ಭಾರೀ ಅಚ್ಚರಿ ಮೂಡಿಸಿದೆ.