ವಿಜಯಪುರ: ಕೊಳವೆ ಬಾಯಿಯಿಂದ ರಕ್ಷಿಸಲ್ಪಟ್ಟ 2 ವರ್ಷದ ಮಗು ಸಾತ್ವಿಕ್ ನನ್ನು ವಿಜಯಪುರ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಆಸ್ಪತ್ರೆ ಆವರಣದಲ್ಲಿ ಕೇಕ್ ಕತ್ತರಿಸಿ ಮಗುವಿಗೆ ತಿನ್ನಿಸಿ ಆಸ್ಪತ್ರೆ ವೈದ್ಯರು, ವೈದ್ಯಕಿಯ ಸಿಬ್ಬಂದಿಗಳು ಸಾತ್ವೀಕ್ ನನ್ನು ಬೀಳ್ಕೊಟ್ಟಿದ್ದಾರೆ. ಸಾತ್ವಿಕ್ ಆರೋಗ್ಯದಿಂದ ಲವಲವಿಕೆಯಿಂದ ಇದ್ದಾನೆ ಎಂದು ತಿಳಿದುಬಂದಿದೆ.
ಕೊಳವೆ ಬಾವಿಯಿಂದ ರಕ್ಷಿಸಲಾಗಿದ್ದ ಸಾತ್ವಿಕ್ ಆರೋಗ್ಯ ಸ್ಥಿರವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ಟೆಸ್ಟ್ ಗಳನ್ನು ಮಾಡಲಾಗಿತ್ತು. ಎಲ್ಲಾ ಟೆಸ್ಟ್ ಗಳ ವರದಿ ನಾರ್ಮಲ್ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಏಪ್ರಿಲ್ 3ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಮನೆ ಮುಂದೆ ಆತವಾಡುತ್ತಿದ್ದ ಮಗು ಸಾತ್ವಿಕ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸಾತ್ವಿಕ್ ನನ್ನು ರಕ್ಷಿಸಲಾಗಿತ್ತು.