
ದಾವಣಗೆರೆ: ಕಾರ್ಮಿಕರಿಗೆ ಕನಿಷ್ಠ ವೇತನ ಚಾರಿ ಸಂಬಂಧ ಸಹಾಯವಾಣಿ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಕಾರ್ಮಿಕ ಮುಖಂಡರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಸಚಿವರು, ಸಹಾಯವಾಣಿ ಕುರಿತಾಗಿ ಅಧಿಕಾರಿಗಳು, ಕಾರ್ಮಿಕ ಸಂಘಟನೆಗಳ ಮುಖಂಡರು ಸಲಹೆ ನೀಡಬೇಕು. ತುರ್ತಾಗಿ ಪರಿಹಾರ ಒದಗಿಸಲು ಕೊಂದು ಕೊರತೆ ನಿವಾರಿಸಲು ಸಹಾಯವಾಣಿಯಿಂದ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಯೋ ಮ್ಯಾಪಿಂಗ್ ವ್ಯವಸ್ಥೆ ಜಾರಿಗೆ ಚಿಂತನೆ ನಡೆಸಲಾಗಿದೆ. 2017ರಲ್ಲಿ 8 ಲಕ್ಷದಷ್ಟು ಕಟ್ಟಡ ಕಾರ್ಮಿಕರಿದ್ದರು. ಈ ಸಂಖ್ಯೆ 2019 -22ರ ಅವಧಿಯಲ್ಲಿ 39 ಲಕ್ಷಕ್ಕೆ ಏರಿಕೆಯಾಗಿದೆ. ಈ ಹಿಂದೆ 800 ರಿಂದ 900 ಕೋಟಿ ರೂ. ಸೆಸ್ ಸಂಗ್ರಹವಾಗುತ್ತಿತ್ತು. ಈಗ ಕಾರ್ಮಿಕರ ಸಂಖ್ಯೆ ಅಧಿಕವಾಗಿದ್ದರೂ ಒಂದು ಸಾವಿರ ಕೋಟಿ ರೂ. ಸೆಸ್ ಸಂಗ್ರಹವಾಗುತ್ತಿದೆ. ನಕಲಿ ಕಾರ್ಡ್ ಗಳ ಪತ್ತೆ ಮತ್ತು ಸೆಸ್ ಸಂಗ್ರಹ ಹೆಚ್ಚಳಕ್ಕೆ ಜಿಯೋ ಮ್ಯಾಪಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.