ಜಮೀರ್ ಅಹಮದ್ ಸೇರಿದಂತೆ ವಿವಿಧ ಶಾಸಕರ ಹೇಳಿಕೆಯ ಬಳಿಕ ರಾಜ್ಯ ಕಾಂಗ್ರೆಸ್ ಮುಂದಿನ ಸಿಎಂ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಿಎಂ ಆಯ್ಕೆ ಹೈಕಮಾಂಡ್ ಲೆಕ್ಕಾಚಾರಕ್ಕೆ ಸೇರಿದ್ದು ಅಂತಾ ಹೇಳಿದ್ದಾರೆ.
ಸಿದ್ದರಾಮಯ್ಯ ಅಭಿಮಾನಿಗಳು ಅವರೇ ನಮ್ಮ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಅದಕ್ಕೆ ನಿರ್ಬಂಧ ಹಾಕೋಕೆ ಆಗೋದಿಲ್ಲ. ಅದು ಅವರ ಇಷ್ಟ. ರಾಜ್ಯದಲ್ಲಿ ಇನ್ನೂ ಚುನಾವಣೆ ನಡೆಯಬೇಕು, ಶಾಸಕರ ಆಯ್ಕೆ ಆಗಬೇಕು. ಪಕ್ಷಕ್ಕೆ ಬಹುಮತ ಸಿಗಬೇಕು. ಇದಾದ ಬಳಿಕ ಹೈಕಮಾಂಡ್ ನಿರ್ಧಾರದಂತೆ ಸಿಎಂ ಆಯ್ಕೆ ಲೆಕ್ಕಾಚಾರ ಆರಂಭವಾಗುತ್ತೆ.
ಆದರೆ ರಾಜ್ಯದಲ್ಲಿ ಇನ್ನು ಚುನಾವಣೆಯೇ ಆಗಿಲ್ಲ. ಚುನಾವಣೆ ಯಾವಾಗ ಬರುತ್ತೆ ಅನ್ನೋದೂ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡುವ ಅವಶ್ಯಕತೆಯೇ ಇರಲಿಲ್ಲ. ಎಲ್ಲಾ ಪಕ್ಷದಲ್ಲೂ ಜಗಳ ಕಾಮನ್ ಎಂದು ಹೇಳಿದ್ರು.
ಇದೇ ವೇಳೆ ಸತೀಶ್ ಮುಂದಿನ ಸಿಎಂ ಎಂಬ ಅಭಿಮಾನಿಗಳ ಅಭಿಯಾನದ ವಿಚಾರವಾಗಿಯೂ ಮಾತನಾಡಿದ ಅವರು, ಅಭಿಮಾನಿಗಳೇನೋ ಮಾಡ್ತಿದ್ದಾರೆ ಮಾಡಲಿ. ಈಗ ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಮೇಲೆ ಇವುಗಳ ಬಗ್ಗೆ ಚರ್ಚೆ ಮಾಡೋಣ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಇದಾದ ಬಳಿಕ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತೆ ಎಂದು ಹೇಳಿದ್ರು.