
ಬೆಳಗಾವಿ: ಸಚಿವ ಕೆ.ಎನ್.ರಾಜಣ್ಣ ಮೇಲೆ ಹನಿಟ್ರ್ಯಾಪ್ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ರಾಜಣ್ಣ ಅವರು ದೂರು ದಾಖಲಿಸಿದರೆ ತನಿಖೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಗರ್ಜಿಸುವ ಹುಲಿಗಳಿಗೆ ಹನಿಟ್ರ್ಯಾಪ್ ಮಾಡಲಾಗುತ್ತಿದೆ ಎಂದು ದೂರಿದರು. ಈ ಪ್ರಕರಣ ಸಿಬಿಐಗೆ ನೀಡುವ ಅಗತ್ಯವಿಲ್ಲ. ದೂರು ದಾಖಲಿಸಿದರೆ ಪೊಲೀಸರೇ ತನಿಖೆ ನಡೆಸುತ್ತಾರೆ. ಇದರ ಹಿಂದೆ ಇರುವ ಸೂತ್ರದಾರ ಯಾರು ಎಂಬುದು ಹೊರಗೆ ಬರಬೇಕು ಎಂದರು.
ಹಾಯ್ ಅಂದರೆ ನೀವೇಕೆ ಹಲೋ ಅಂತೀರಾ..? ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ವಿಲ್ ಪವರ್, ಬದ್ಧತೆಯ ಮೇಲೆ ಇದು ನಿರ್ಧಾರವಾಗುತ್ತೆ. ಒಂದು ಸಲ ಹಾಯ್ ಅಂದರೆ ಅಟ್ರ್ಯಾಕ್ಟ್ ಆಗುತ್ತೆ, ಎರಡನೇ ಸಲಕ್ಕೆ ಆಗುತ್ತಾ? ಸ್ವಲ್ಪ ವೀಕ್ನೆಸ್ ಇದ್ದರೆ ಒಂದೇ ಸಲಕ್ಕೆ ಮೊಬೈಲ್ ರಿಂಗ್ ಆಗೋಕೆ ಶುರು ಆಗುತ್ತೆ. ಮೊದಲೇ ಹೆದರಿಕೆ ಇದ್ದರೆ 10 ಬಾರಿ ಹಾಯ್ ಅಂದರೂ ಹಲೋ ಅನ್ನಲ್ಲ ಎಂದಿದ್ದಾರೆ.