alex Certify BREAKING NEWS: ಸಿಎಂ ಆಗಲೂ ಆಸೆಯಿದೆ; ಅಧ್ಯಕ್ಷನಾಗಲೂ ಆಸೆಯಿದೆ: ಆದ್ರೆ ಪಕ್ಷ ತೀರ್ಮಾನ ಮಾಡಬೇಕು ಎಂದ ಸಚಿವ ಸತೀಶ್ ಜಾರಕಿಹೊಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಸಿಎಂ ಆಗಲೂ ಆಸೆಯಿದೆ; ಅಧ್ಯಕ್ಷನಾಗಲೂ ಆಸೆಯಿದೆ: ಆದ್ರೆ ಪಕ್ಷ ತೀರ್ಮಾನ ಮಾಡಬೇಕು ಎಂದ ಸಚಿವ ಸತೀಶ್ ಜಾರಕಿಹೊಳಿ

ಹಾವೇರಿ: ನಮಗೆ ಸಿಎಂ ಆಗಲೂ ಆಸೆಯಿದೆ; ಅಧ್ಯಕ್ಷನಾಗಲೂ ಆಸೆಯಿದೆ. ಆದರೆ ಅಂತಿಮವಾಗಿ ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಈ ಹಿಂದೆ ಸಿಎಂ ಆಗ್ತಾರೆ ಅಂತಾ ಹೆಸರು ಓಡಾಡ್ತಾ ಇತ್ತು. ಈಗ ಅಧ್ಯಕ್ಷ ಆಗ್ತಾರೆ ಅಂತ ಹೆಸರು ಓಡಾಡ್ತಾ ಇದೆ. ಸಿಎಂ ಆಗಬೇಕು ಎಂಬ ಆಸೆಯೂ ಇದೆ; ಕೆಪಿಸಿಸಿ ಅಧ್ಯಕ್ಷನಾಗುವ ಆಸೆಯೂ ಇದೆ. ಆದರೆ ಇದೆಲ್ಲ ನಮ್ಮ ಉತ್ಸಾಹ ಅಷ್ಟೇ. ಅಂತಿಮವಾಗಿ ಹೈಕಮಾಂಡ್ ನಿರ್ಧಾರವೇ ಫೈನಲ್. ನಾವೆಲ್ಲ ಕಾದು ನೋಡಬೇಕಷ್ಟೇ ಎಂದು ಹೇಳಿದರು.

ಈ ವಿಚಾರವಾಗಿ ನಾನು ಯಾವುದೇ ಒತ್ತಡ ಹಾಕಿಲ್ಲ. ಲಾಭಿ ನಡೆಸಿಲ್ಲ. ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೇವೆ ಎಂಬ ತೃಪ್ತಿಯಿದೆ. ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ ಅದರ ಬಗ್ಗೆ ತೃಪ್ತಿಯಿದೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...