ತುಮಕೂರು : ಜು.1 ಕ್ಕೆ ಆಗಿಲ್ಲ ಅಂದರೆ ಆಗಸ್ಟ್ ನಲ್ಲಿ ಅಕ್ಕಿ ಕೊಡುತ್ತೇವೆ ಈ ತಿಂಗಳು ಆಗಲಿಲ್ಲ, ಅಂದ್ರೆ ಮುಂದಿನ ತಿಂಗಳು ಅಕ್ಕಿ ಕೊಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಈ ತಿಂಗಳು ಆಗಲಿಲ್ಲ ಅಂದ್ರೆ ಮುಂದಿನ ತಿಂಗಳು ಅಕ್ಕಿ ಕೊಡುತ್ತೇವೆ, 10 ಕೆಜಿ ಅಕ್ಕಿ ನೀಡುವಾಗ ತಡವಾಗಬಹುದು. ಆದರೆ 5 KG ಅಕ್ಕಿ ಈಗಾಗಲೇ ನೀಡಲಾಗುತ್ತಿದೆ ಎಂದರು.
ಎಲ್ಲಾ ರಾಜ್ಯಗಳಿಂದ ಅಕ್ಕಿ ತರಲು ಪ್ರಯತ್ನ ನಡೆಯುತ್ತಿದೆ ಎಂದರು. 5 ಕೆ.ಜಿ ಸೇರಿಸಿ 10ಕೆಜಿ ಕೊಡುತ್ತೇವೆ ಅಂತ ನಾವು ಚುನಾವಣೆಯಲ್ಲಿ ನಾವು ಹೇಳಿದ್ದೆವು ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದರು. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಎಂದು ಸಚಿವ ಕೆಎನ್ ರಾಜಣ್ಣ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಅದು ಈಗ ಅಲ್ಲ ಮುಂದಿನ ಅವಧಿಯಲ್ಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.