ಬೆಂಗಳೂರು: ಸರ್ಕಾರದ ವತಿಯಿಂದ ಸಚಿವರ ಸಂಚಾರಕ್ಕೆ 33 ಹೊಸ ಇನೋವಾ ಕಾರ್ ಗಳನ್ನು ಖರೀದಿಸಿದ್ದು, ವಿತರಣೆ ಕಾರ್ಯ ಆರಂಭಿಸಿದೆ.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ತಮಗೆ ನೀಡಲಾದ ವಾಹನಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನದ ಸಂಖ್ಯೆಯನ್ನು ತಮ್ಮ ವಾಹನದ ನೋಂದಣಿ ಸಂಖ್ಯೆಯಾಗಿ ಪಡೆದುಕೊಂಡಿದ್ದಾರೆ.
ಏಪ್ರಿಲ್ 14 ಅಂಬೇಡ್ಕರ್ ಜನ್ಮ ದಿನವಾಗಿದೆ. ಸತೀಶ ಜಾರಕಿಹೊಳಿ ಅವರಿಗೆ ನೀಡಿದ ವಾಹನದ ಸಂಖ್ಯೆ ಕೆಎ 01, ಜಿಬಿ 1404 ಆಗಿದೆ. ನೋಂದಣಿ ಸಂಖ್ಯೆ ಯಾವುದಿರಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸಚಿವರಿಗೆ ಪತ್ರ ಬರೆದಿದ್ದು, ಅಂಬೇಡ್ಕರ್ ಜನ್ಮ ದಿನಾಂಕವನ್ನು ಸತೀಶ್ ಜಾರಕಿಹೊಳಿಯವರಿಗೆ ನೀಡಲಾಗಿದೆ. ಆ ಪ್ರಕಾರ ವಾಹನ ನೋಂದಣಿ ಮಾಡಲಾಗಿದೆ. ಬಹುತೇಕ ಸಚಿವರು ಸಂಖ್ಯಾಶಾಸ್ತ್ರಕ್ಕೆ ಜೋತುಬಿದ್ದು 9 ಸಂಖ್ಯೆ ಪಡೆದುಕೊಂಡಿದ್ದಾರೆನ್ನಲಾಗಿದೆ.