ಇಸ್ರೇಲ್-ಹಮಾಸ್ ಯುದ್ಧದಿಂದ ಗಾಜಾ ಪಟ್ಟಿ ಸಂಪೂರ್ಣವಾಗಿ ನಾಶವಾಗಿದೆ. ಉಪಗ್ರಹ ಚಿತ್ರಗಳು ಈ ವಿಧ್ವಂಸಕ ದೃಶ್ಯಗಳನ್ನು ಬಹಿರಂಗಪಡಿಸಿವೆ.
ಗಾಜಾ ನಗರ ಸಂಪೂರ್ಣವಾಗಿ ನಾಶವಾಗಿದೆ. ಕಟ್ಟಡಗಳು ಧ್ವಂಸಗೊಂಡಿವೆ ಮತ್ತು ರಸ್ತೆಗಳ ತುಂಬಾ ಗುಂಡಿಯಾಗಿದೆ. ಯುದ್ಧದಿಂದಾಗಿ ಲಕ್ಷಾಂತರ ಪಲೆಸ್ಟೀನಿಯರು ತಮ್ಮ ಮನೆಗಳನ್ನು ತೊರೆದು ದಕ್ಷಿಣದ ಕಡೆಗೆ ಸ್ಥಳಾಂತರಗೊಂಡಿದ್ದಾರೆ.
ಸಿಟಿ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ಮತ್ತು ಓರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರ ಪ್ರಕಾರ, ಗಾಜಾದಲ್ಲಿನ 59.8% ಕಟ್ಟಡಗಳು ಹಾನಿಗೊಳಗಾಗಿವೆ.
ಯುಎನ್ ಸ್ಯಾಟಲೈಟ್ ಸೆಂಟರ್‌ನ ಹಿಂದಿನ ಅಂದಾಜಿನ ಪ್ರಕಾರ, ಗಾಜಾದಲ್ಲಿನ 69% ಕಟ್ಟಡಗಳು ಹಾನಿಗೊಳಗಾಗಿವೆ.
ಈ ಯುದ್ಧದಲ್ಲಿ 46,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.