ದೆಹಲಿಯ ಸರೋಜಿನಿ ನಗರವು ಬೀದಿ ಶಾಪಿಂಗ್ಗಾಗಿ ರಾಜಧಾನಿಯ ಅತ್ಯಂತ ಜನಪ್ರಿಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅಲ್ಲಿ ಮಹಿಳೆಯರು ಅಗ್ಗದ ಬೆಲೆಯಲ್ಲಿ ಟ್ರೆಂಡಿ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಮಾರುಕಟ್ಟೆಯು ಸಾಮಾನ್ಯವಾಗಿ ತುಂಬಾ ಜನಸಂದಣಿಯಿಂದ ಕೂಡಿರುತ್ತದೆ, ವಿಶೇಷವಾಗಿ ವಾರಾಂತ್ಯದಲ್ಲಿ ಚೌಕಾಸಿ ಇಲ್ಲಿ ಭರ್ಜರಿಯಾಗಿ ನಡೆಯುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು ನಕ್ಕು ನಗಿಸುವಂತಿದೆ. ಬೀದಿ ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸಲು ತಮಾಷೆಯ ಮಾರ್ಗ ತನ್ನದಾಗಿಸಿಕೊಂಡಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ wevidh_india ಪುಟದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಇದು ತಮಾಷೆಯ ವಿಡಿಯೋ ಎನಿಸಿದರೂ ಈ ವ್ಯಕ್ತಿ ಆಕ್ರಮಣಕಾರಿಯಾಗಿದೆ ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಗ್ರಾಹಕರನ್ನು ಈ ವ್ಯಕ್ತಿ ‘ಚಿಂಕಿ ಮಿಂಕಿ’ ಎಂದು ಕರೆಯುತ್ತಾನೆ. ಇದು ಜಾತಿ ನಿಂದನೆಯಾಗಿದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.