alex Certify ಸುಶಾಂತ್​ ಬಗ್ಗೆ ಕೊನೆಯ ಪೋಸ್ಟ್​ ಮಾಡಿದ್ದ ಸರೋಜ್​ ಖಾನ್​, ನೆನಪಿಸಿಕೊಂಡ ಪುತ್ರಿ ಸುಕೈನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್​ ಬಗ್ಗೆ ಕೊನೆಯ ಪೋಸ್ಟ್​ ಮಾಡಿದ್ದ ಸರೋಜ್​ ಖಾನ್​, ನೆನಪಿಸಿಕೊಂಡ ಪುತ್ರಿ ಸುಕೈನಾ

ಸುಕೈನಾ ಅವರು ನೃತ್ಯ ಸಂಯೋಜಕಿ ಸರೋಜ್​ ಖಾನ್​ ಅವರ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್​ ಅನ್ನು ನೆನಪಿಸಿಕೊಂಡಿದ್ದಾರೆ. ಅದು ಸುಶಾಂತ್​ ಸಿಂಗ್​ ರಜಪೂತ್​ ಕುರಿತು ಪೋಸ್ಟ್​ ಮಾಡಲಾಗಿತ್ತು.

ಜೂನ್​ 14, 2020 ರಂದು ಸುಶಾಂತ್​ ಮರಣದ ನಂತರ ಸರೋಜ್​ ಖಾನ್​ ತಮ್ಮ ಇನ್​ಸ್ಟಾ ಗ್ರಾಂ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. 2020 ರ ಜುಲೈ 3ರಂದು ಅವರು ಹೃದಯ ಸ್ತಂಭನದಿಂದ ನಿಧನರಾದರು.

ಸರೋಜ್​ ಅವರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಇಷ್ಟಪಟ್ಟಿದ್ದರು ಮತ್ತು ಪೋಸ್ಟ್​ ಹಂಚಿಕೊಳ್ಳಲು ಸಹಾಯ ಮಾಡುವಂತೆ ತಮ್ಮನ್ನು ಕೇಳುತ್ತಿದ್ದರು ಎಂದು ಸುಕೈನಾ ನೆನಪಿಸಿಕೊಂಡಿದ್ದಾರೆ. ಸುಶಾಂತ್​ ಸಿಂಗ್​ ರಜಪೂತ್​ ಅವರ ಮರಣದ ನಂತರ, ಸರೋಜ್​ ಅವರು ಸುಕೈನಾಗೆ ಇನ್​ಸ್ಟಾದಲ್ಲಿ ಅವರ ಬಗ್ಗೆ ಮಾತನಾಡಲು ಬಯಸಿದ್ದರು ಎಂದು ಹೇಳಿದರು.

ನನಗೆ ನೆನಪಿರುವ ಕೊನೆಯ ಪೋಸ್ಟ್​ ಸುಶಾಂತ್​ಗೆ ಸಂಬಂಧಿಸಿದ್ದು, ಅವರು ಆ ಹುಡುಗನ ಬಗ್ಗೆ ಒಂದು ಪೋಸ್ಟ್​ ಬರೆಯುವಂತೆ, ಆ ಬಗ್ಗೆ ನಾನು ಮಾತನಾಡಲು ಬಯಸುವುದಾಗಿ ಹೇಳಿದ್ದರು ಎಂದು ಅಂದಿನ ಘಟನೆ ನೆನಪಿಸಿಕೊಂಡಿದ್ದಾರೆ.

“ನಾನು ನಿಮ್ಮೊಂದಿಗೆ ಎಂದಿಗೂ ಕೆಲಸ ಮಾಡಿಲ್ಲ. ಆದರೆ ನಾವು ಹಲವಾರು ಬಾರಿ ಭೇಟಿಯಾಗಿದ್ದೇವೆ. ನಿಮ್ಮ ಜೀವನದಲ್ಲಿ ಏನು ತಪ್ಪಾಗಿದೆ. ನೀವು ಅಂತಹ ಕಠಿಣ ಹೆಜ್ಜೆ ಇಟ್ಟಿದ್ದಕ್ಕಾಗಿ ನನಗೆ ಆಘಾತವಾಗಿದೆ. ನೀವು ಹಿರಿಯರೊಂದಿಗೆ ಮಾತನಾಡಬಹುದಿತ್ತು ಅದು ನಿಮಗೆ ಸಹಾಯ ಮಾಡಬಹುದಿತ್ತು. ದೇವರು ನಿಮ್ಮ ಆತ್ಮವನ್ನು ಆಶೀರ್ವದಿಸಲಿ. ನಾನು ನಿನ್ನನ್ನು ಪ್ರೀತಿಸುತ್ತಿದ್ದೆ ಮತ್ತು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ” ಎಂದು ಅವರು ಹೇಳಿಕೊಂಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...