alex Certify ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ ಪದವೀಧರರಿಗೆ ಇಲ್ಲಿದೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ ಪದವೀಧರರಿಗೆ ಇಲ್ಲಿದೆ ಗುಡ್ ನ್ಯೂಸ್

ಸರ್ಕಾರಿ ನೌಕರಿ ಹುಡುಕುತ್ತಿರುವ ಯುವಕರಿಗೆ ಉತ್ತಮ ಅವಕಾಶವಿದೆ. ಸಿಬ್ಬಂದಿ ಆಯ್ಕೆ ಆಯೋಗದಲ್ಲಿ(ಎಸ್‌ಎಸ್‌ಸಿ) ವಿವಿಧ ಹುದ್ದೆಗಳ ನೇಮಕಾತಿ ಬಗ್ಗೆ ಮಾಹಿತಿ ಇಲ್ಲಿದೆ.

ಎಸ್‌ಐ, ತೆರಿಗೆ ಸಹಾಯಕ ಸಿ, ಯುಡಿಸಿ, ಸಹಾಯಕ, ಅಕೌಂಟೆಂಟ್, ಆಡಿಟರ್, ಜೆಎಸ್‌ಒ, ಇನ್‌ಸ್ಪೆಕ್ಟರ್, ಎಎಸ್‌ಒ, ಅಸಿಸ್ಟೆಂಟ್ ಆಡಿಟ್ ಆಫೀಸ್, ಅಸಿಸ್ಟೆಂಟ್ ಅಕೌಂಟ್ ಆಫೀಸರ್ ಇತ್ಯಾದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದಕ್ಕೆ ಇನ್ನು ಕೇವಲ 3 ದಿನಗಳು ಬಾಕಿ ಉಳಿದಿವೆ.

ಈ ಪೋಸ್ಟ್‌ ಗಳಿಗೆ (SSC CGL ನೇಮಕಾತಿ 2022) ಅರ್ಜಿ ಸಲ್ಲಿಸಲು ಬಯಸುವ ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು SSC ಯ ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23 ಜನವರಿ, 2022 ಆಗಿದೆ.

ಇದಲ್ಲದೆ, ಅಭ್ಯರ್ಥಿಗಳು ಈ ಪೋಸ್ಟ್‌ ಗಳಿಗೆ https://ssc.nic.in/Portal/Apply ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, https://ssc.nic.in/SSCFileServer/PortalManagement/UploadedFiles/notice_CGLE_23122021.pdf ಮೂಲಕ ಅಧಿಕೃತ ಅಧಿಸೂಚನೆ ನೋಡಬಹುದು. ಈ ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ, ನೀವು ಭಾರತ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಉದ್ಯೋಗಗಳನ್ನು ಮಾಡಬಹುದು.

ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23 ಜನವರಿ, 2022. ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ತತ್ಸಮಾನ ಪದವಿ ಹೊಂದಿರಬೇಕು. 100 ರೂ. ಅರ್ಜಿ ಶುಲ್ಕವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...