
ರಾಜಸ್ಥಾನದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಗಾಯತ್ರಿ ರಾಥೋಡ್, ಯುವ ಉದ್ಯೋಗಾಕಾಂಕ್ಷಿಯೊಬ್ಬರಿಗೆ, “ನೀನು ಹುಟ್ಟುವ ಮೊದಲು ಸರ್ಕಾರದಿಂದ ಅನುಮತಿ ಪಡೆದಿದ್ದೀಯಾ?” ಎಂದು ಕೇಳಿದ್ದು, ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರು ಶೀಘ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಅನೇಕರು ಉನ್ನತ ಶ್ರೇಣಿಯ ಅಧಿಕಾರಿಯ ಪ್ರತಿಕ್ರಿಯೆಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಎಎಸ್ ಅಧಿಕಾರಿಯ ಹೇಳಿಕೆಯ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಗುರಿಯಾಗಿದೆ.
ಬಳಕೆದಾರ ಬಲ್ಕೌರ್ ಸಿಂಗ್ ಧಿಲ್ಲೋನ್ X (ಹಿಂದೆ ಟ್ವಿಟರ್) ನಲ್ಲಿ ವೀಡಿಯೊವನ್ನು ಹಂಚಿಕೊಂಡ ನಂತರ ಈ ಘಟನೆಯು ಗಮನ ಸೆಳೆದಿದ್ದು, ಈ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ನಿರುದ್ಯೋಗದ ಬಗ್ಗೆ ಸರ್ಕಾರಿ ಅಧಿಕಾರಿಯ ವರ್ತನೆಯನ್ನು ನೆಟಿಜನ್‌ಗಳು ಪ್ರಶ್ನಿಸಿದ್ದಾರೆ
ಒಬ್ಬ ಬಳಕೆದಾರ, “ಇದು ಮೇಡಮ್ ಮಾತನಾಡುತ್ತಿಲ್ಲ; ಇದು ಅವರ ಅಹಂಕಾರ ಮಾತನಾಡುತ್ತಿದೆ !” ಎಂದಿದ್ದರೆ ಮತ್ತೊಬ್ಬರು ‘ಹುಟ್ಟುವ ಮುನ್ನವೇ ಮೇಡಂ ಸರ್ಕಾರವನ್ನು ಕೇಳಿರಬಹುದು, ಅದಕ್ಕೇ ಐಎಎಸ್ ಅಧಿಕಾರಿಯಾದರು’ ಎಂದು ಹೇಳಿದ್ದಾರೆ.