ಬೆಂಕಿಪಟ್ಟಣದೊಳಗೆ ಫಿಟ್ ಆಗುವ ಸೀರೆ, ತೆಲಂಗಾಣ ನೇಕಾರನ ವಿಭಿನ್ನ ಪ್ರಯತ್ನ 12-01-2022 3:21PM IST / No Comments / Posted In: Latest News, India, Live News, Special, Life Style ಭಾರತೀಯರ ಕಲೆಗಳಿಗೆ ಗಡಿಯಿಲ್ಲ. ವಿಶ್ವಗುರು ಅಂತಾ ಕರೆಸಿಕೊಳ್ಳೊ ಭಾರತ ತನ್ನ ಕಲಾ ಶ್ರೀಮಂತಿಕೆಗೆ ಹೆಸರುವಾಸಿಯಾಗಿದೆ. ಅದ್ರಲ್ಲು ಫ್ಯಾಷನ್ ಇಂಡಸ್ಟ್ರಿಗೆ ತನ್ನದೇ ಕೊಡುಗೆ ನೀಡಿರೊ ಭಾರತ ವಿವಿಧತೆಯಿಂದ ಕೂಡಿದೆ. ಇಳ್ಕಲ್ ಸೀರೆ, ಲಕ್ನವಿ ಚಿಕನ್ ಕಾರಿ, ಇಖತ್, ಕಲಮ್ ಕಾರಿ, ಇಂಡಿಗೋ ಮುಂತಾದ ಕೊಡುಗೆಗಳನ್ನ ಪ್ರಪಂಚಕ್ಕೆ ನೀಡಿರೋದು ನಮ್ಮ ಹೆಮ್ಮೆಯ ಭಾರತ ದೇಶ. ಈ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರೊ ತೆಲಂಗಾಣದ ನೇಕಾರರೊಬ್ಬರು, ಬೆಂಕಿಪಟ್ಟಣೊದೊಳಗೆ ಮಡಚಿ ಇಡಬಹುದಾದ ಸೀರೆಯನ್ನ ನೇಯ್ದಿದ್ದಾರೆ. ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ನಲ್ಲ ವಿಜಯ್ ಅವರು ಕೈ ಮಗ್ಗದಲ್ಲಿ ಈ ಸೀರೆಯನ್ನ ನೇಯ್ದಿದ್ದಾರೆ. ಮಂಗಳವಾರ ಈ ವಿಭಿನ್ನ ಸೀರೆಯನ್ನ ತೆಲಂಗಾಣದ ಸಚಿವರಾದ ಕೆಟಿ ರಾಮರಾವ್, ಪಿ ಸಬಿತಾ ಇಂದ್ರರೆಡ್ಡಿ, ವಿ ಶ್ರೀನಿವಾಸ್ ಗೌಡ್ ಮತ್ತು ಎರ್ರಬೆಲ್ಲಿ ದಯಾಕರ್ ರಾವ್ ಅವರ ಮುಂದೆ ಪ್ರದರ್ಶಿಸಲಾಯಿತು. ನಂತರ ವಿಜಯ್ ರವರು ಈ ಸೀರೆಯನ್ನ, ಸಬಿತಾ ಇಂದ್ರರೆಡ್ಡಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿದು ಬಂದಿದೆ. ಬೆಂಕಿಪಟ್ಟಣದಲ್ಲಿ ಇಡಬಹುದಾದ ಈ ಸೀರೆಯನ್ನ ಕೈಯಿಂದ ನೇಯಲು ಆರು ದಿನಗಳಾಗುತ್ತವೆ. ಆದರೆ ಯಂತ್ರದ ಸಹಾಯದಿಂದ ನೇಯ್ದರೆ ಎರಡು ದಿನಗಳು ಹಿಡಿಯುತ್ತದೆ ಎಂದು ವಿಜಯ್ ಹೇಳಿದ್ದಾರೆ.