ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಕ್ರಿಕೆಟಿಗ ಶುಭ್ ಮನ್ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ನಡುವೆ ಮತ್ತೆ ಇಬ್ಬರ ವಿಡಿಯೋ ವೈರಲ್ ಆಗಿದೆ. ಮಂಗಳವಾರ ರಾತ್ರಿ ಮುಂಬೈನಲ್ಲಿ ನಡೆದ ಜಿಯೋ ವರ್ಲ್ಡ್ ಪ್ಲಾಜಾ ಕಾರ್ಯಕ್ರಮದಲ್ಲಿ ಈ ಜೋಡಿ ಕಾಣಿಸಿಕೊಂಡಿದೆ.
ಕಾರ್ಯಕ್ರಮಕ್ಕೆ ಆಗಮಿಸಿದ ಸಾರಾ ಕೆಂಪುಡುಗೆಯಲ್ಲಿ ಮಿಂಚಿದ್ರೆ, ಶುಭಮನ್ ಕಪ್ಪು ಬಟ್ಟೆ ಧರಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿರ್ಗಮಿಸುವಾಗ ಅವರು ಛಾಯಾಗ್ರಾಹಕರಿಗೆ ಕಾಣಿಸಿಕೊಂಡ್ರು. ಪಾಪರಾಜಿ (ಛಾಯಾಗ್ರಾಹಕ) ರನ್ನು ಗಮನಿಸುತ್ತಿದ್ದಂತೆ, ಸಾರಾ ಹಿಂದೆ ಉಳಿದ್ರೆ ಶುಭಮನ್ ಮೊದಲು ನಿರ್ಗಮಿಸುತ್ತಾರೆ.
ಕೆಲವು ದಿನಗಳ ಹಿಂದೆ ಪುಣೆಯಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದ ವೇಳೆ ಸಾರಾ, ಶುಭ್‌ಮನ್‌ಗಾಗಿ ಹುರಿದುಂಬಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಶುಭಮನ್ 10 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ 7ನೇ ಓವರ್‌ನಲ್ಲಿ ಬೌಂಡರಿ ಬಾರಿಸಿದ್ರು. ಈ ವೇಳೆ ಸಾರಾ ಚಪ್ಪಾಳೆ ತಟ್ಟಿ ಶುಭಮನ್ ರನ್ನು ಹುರಿದುಂಬಿಸುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅಂದಹಾಗೆ, ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ 2020ರಲ್ಲಿ ಹುಟ್ಟಿಕೊಂಡವು.