
ಮುಂಬೈ: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.ಮಗಳು ಸ್ನಾತಕೋತ್ತರ ಪದವಿ ಪೂರೈಸಿದ್ದಕ್ಕೆ ಸಚಿನ್ ತೆಂಡೂಲ್ಕರ್ ಸಂತಸ ಹಂಚಿಕೊಂಡಿದ್ದಾರೆ.
ಲಂಡನ್ ನ ಲಂಡನ್ಸ್ ಗ್ಲೋಬಲ್ ಯುನಿವರ್ಸಿಟಿಯಿಂದ ಮೆಡಿಸಿನ್ ವಿಭಾಗದಲ್ಲಿ ಕ್ಲಿನಿಕಲ್ ಆಂಡ್ ಪಬ್ಲಿಕ್ ಹೆಲ್ತ್ ನ್ಯೂಟ್ರಿಷಿಯನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಮಾಣಪತ್ರ ಸ್ವೀಕರಿಸಿದ್ದಾರೆ.
ಈ ವಿಚಾರವಾಗಿ ಟ್ವಿಟ್ಟರ್ ನಲ್ಲಿ ಖುಷಿ ಹಚಿಕೊಂಡಿರುವ ಸಚಿನ ತೆಂಡೂಲ್ಕರ್, ಇದೊಂದು ಸುಂದರವಾದ ದಿನ. ನೀನು ಇಂದು ಪದವಿ ಪೂರೀಸಿ ಹೊರಬರಲು ಪಟ್ಟಿರುವ ಪರಿಶ್ರಮಗಳನ್ನು ನೋಡಿದ್ದೇವೆ. ಪೋಷಕರಾಗಿ ನಾವು ಅದನ್ನು ಮೆಚ್ಚಿಕೊಳ್ಳುತ್ತೇವೆ. ಇಲ್ಲಿಂದ ನಿನ್ನ ಎಲ್ಲಾ ಕನಸುಗಳು ತೆರೆದುಕೊಳ್ಳುತ್ತವೆ ಎಂದು ಶುಭಕೋರಿದ್ದಾರೆ.
ಸ್ನಾತಕೋತ್ತರ ಪದವಿ ಜೊತೆಗೆ ಸಾರಾ, ಮಾಡೆಲಿಂಗ್ ಹಾಗೂ ಜಾಹೀರಾತು ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಇನ್ನುಮುಂದೆ ಅವರು ವೈದ್ಯಕೀಯ ಕ್ಷೇತ್ರದಲ್ಲಿಯೂ ಮುಂದುವರೆಯಲಿದ್ದಾರೆ ಎನ್ನಲಾಗಿದೆ.