ಕ್ರಿಕೆಟ್ ಲೋಕದ ದೇವರು ಎಂದೇ ಖ್ಯಾತಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ವೃತ್ತಿ ಜೀವನದ ಕುರಿತು ಇಲ್ಲಿದೆ ಮಾಹಿತಿ.
ಸಚಿನ್ ಪುತ್ರಿ ಸಾರಾ ಸೌಂದರ್ಯವತಿ. ಯಾವ ಮಾಡೆಲ್ ಗೂ ಅವರು ಕಮ್ಮಿ ಇಲ್ಲ. ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫ್ಯಾನ್ಸ್ ಹೊಂದಿದ್ದಾರೆ. ಸದ್ಯ ಅವರು ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಾರಾ ಬಗ್ಗೆ ಇಲ್ಲಿಯವರೆಗೂ ಹಲವಾರು ಗಾಸಿಪ್ ಗಳು ಕೇಳಿ ಬಂದಿದ್ದವು. ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬಂದಿದ್ದವು. ಆದರೆ, ಈ ಬಾರಿ ಅವರು ಮಾಡೆಲಿಂಗ್ ಅಂಗಳಕ್ಕೆ ಕಾಲಿಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಸಾರಾ ಬಟ್ಟೆಗಳ ಬ್ರ್ಯಾಂಡ್ ನ ಜಾಹೀರಾತಿನಲ್ಲಿ ಕಾಣಿಸಿದ್ದಾರೆ. ಈ ಕುರಿತು ವಿಡಿಯೋವನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
BIG BREAKING: ಹೆಲಿಕಾಪ್ಟರ್ ದುರಂತದಲ್ಲಿ CDS ಬಿಪಿನ್ ರಾವತ್ ದಂಪತಿ ಸೇರಿ 13 ಮಂದಿ ಸಾವು
ಬಟ್ಟೆಗಳ ಬ್ರ್ಯಾಂಡ್ ಎಜಿಯೊನ ಹೊಸ ಉಡುಪುಗಳನ್ನು ಹೊರ ತಂದಿದ್ದು, ಇದಕ್ಕೆ ಸಾರಾ ಮಾಡೆಲಿಂಗ್ ಮಾಡಿದ್ದಾರೆ. ಈ ಜಾಹೀರಾತಿನಲ್ಲಿ ಸಾರಾ ಜೊತೆ ನಟಿ ಬನಿತಾ ಸಂಧು ಹಾಗೂ ತಾನಿಯಾ ಶ್ರಾಫ್ ಕೂಡ ಇದ್ದಾರೆ.
https://www.youtube.com/watch?v=as_6Srw1Fw0&feature=youtu.be