ರಣವೀರ್ ಸಿಂಗ್‌ರ ’83’ ಚಿತ್ರದ ಟ್ರೇಲರ್ ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಮಿಂಚಿದ ಮಾರನೇ ದಿನವೇ ಮತ್ತೊಂದು ಜಾಗತಿಕ ಲ್ಯಾಂಡ್‌ಮಾರ್ಕ್ ಬಳಿ ಬಾಲಿವುಡ್‌ನ ಇನ್ನೊಂದು ಚಿತ್ರದ ಝಲಕ್ ರಾರಾಜಿಸಿದೆ.
ನ್ಯೂಯಾರ್ಕ್‌ನ ಒನ್ ಟೈಮ್ಸ್ ಸ್ಕ್ವೇರ್‌ನಲ್ಲಿರುವ ವಿದ್ಯುನ್ಮಾನ ಬಿಲ್‌ಬೋರ್ಡ್ ಒಂದರ ಮೇಲೆ, ರಜನಿಕಾಂತ್ ಅಳಿಯ ಧನುಷ್ ಮತ್ತು ಸಾರಾ ಅಲಿ ಖಾನ್‌ರ ’ಅತ್ರಾಂಗಿ ರೇ’ ಚಿತ್ರದ ಪೋಸ್ಟರ್ ರಾರಾಜಿಸುತ್ತಿದೆ.
ಬೆಳಗಾವಿಯಲ್ಲಿ ಬೇರೆಯವರು ಬೇಳೆ ಬೇಯಿಸಿಕೊಳ್ಳುವುದು ಬೇಡ: ಮಹಾರಾಷ್ಟ್ರ ಸಿಎಂ ಠಾಕ್ರೆಗೆ HDK ತಿರುಗೇಟು
ಇನ್‌ಸ್ಟಾಗ್ರಾಂನಲ್ಲಿ ಈ ಸ್ಟೋರಿ ಹಂಚಿಕೊಂಡಿರುವ ಸಾರಾ, ನ್ಯೂಯಾರ್ಕ್ ಗಗನಚುಂಬಿ ಕಟ್ಟಡಗಳ ನಡುವೆ 1996ರಿಂದಲೂ ಇರುವ ಈ ಭಿತ್ತಿಚಿತ್ರದ ಚಿತ್ರ ಮೇಲೆ ಬರೆದಿದ್ದು, “ಈ ನಗರದಲ್ಲಿ ನಾನು ಕನಸು ಕಂಡಿದ್ದೆ, ಈಗ ಅದು ನಿಜವಾಗುತ್ತಿರುವುದನ್ನು ನೋಡುತ್ತಿದ್ದೇನೆ,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಒಂದಾನೊಂದು ಕಾಲದಲ್ಲಿ ನ್ಯೂಯಾರ್ಕ್ ಟೈಮ್ಸ್‌ನ ಪ್ರಧಾನ ಕಾರ್ಯಾಲಯವಾಗಿದ್ದ ಒನ್ ಟೈಮ್ಸ್ ಸ್ಕ್ವೇರ್ ಜಗತ್ತಿನಲ್ಲಿ ಅತ್ಯಂತ ಪ್ರಖರವಾಗಿರುವ ಎರಡು ಜಾಹೀರಾತು ತಾಣಗಳಲ್ಲಿ ಒಂದಾಗಿದೆ. ಲಂಡನ್‌ನ ಪಿಕ್ಕಾಡಿಲ್ಲಿ ಸರ್ಕಸ್ ಮತ್ತೊಂದು ಜಾಗ.
ನ್ಯೂಯಾರ್ಕ್ ನಗರದ ಕೊಲಂಬಿಯಾ ವಿವಿಯಲ್ಲಿ ರಾಜಕೀಯ ವಿಜ್ಞಾನ ಮತ್ತು ಇತಿಹಾಸ ಅಧ್ಯಾಯನ ಮಾಡಿರುವ ಸಾರಾ ಈ ಮೂಲಕ ನಗರದೊಂದಿಗೆ ಮತ್ತೊಂದು ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
https://www.youtube.com/watch?v=y70ErBbb5wg&feature=youtu.be