ಹೊಸಪೇಟೆ(ವಿಜಯನಗರ): ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ, ಕೊಟ್ಟೂರಿನ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ ಹಾಗೂ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹವನ್ನು ವಿವಿಧ ದಿನಾಂಕಗಳಂದು ನಡೆಸಲಾಗುತ್ತಿದೆ.
100 ಜನರನ್ನೊಳಗೊಂಡಂತೆ ಕಡ್ಡಾಯವಾಗಿ ಕೋವಿಡ್-19 ಮಾರ್ಗಸೂಚಿಯನ್ನು ಪಾಲನೆ ಮಾಡಿ ನಡೆಯುವ ಈ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಬಯಸುವ ವಧು-ವರರು ನೋಂದಾಯಿಸಿಕೊಳ್ಳಬಹುದು.
ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹವು ಆ.14 ರಂದು ಬೆಳಗ್ಗೆ 09ರಿಂದ 10.30ರ ಕಟಕ ಲಗ್ನದಲ್ಲಿ ಜರುಗುವುದು. ವಧು-ವರರು ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ ಆ.2, ನೋಂದಾಯಿಸಿಕೊಂಡಿರುವ ವಧು-ವರರ ವಿವರಗಳನ್ನು ದೇವಾಲಯದಲ್ಲಿ ಪ್ರಕಟಿಸುವ ದಿನಾಂಕ ಆ.5, ವಧುವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಆ.7, ಅಂತಿಮ ವಧು-ವರರ ಪಟ್ಟಿ ಪ್ರಕಟಿಸುವ ದಿನಾಂಕ ಆ.7 ಆಗಿರುತ್ತದೆ.
ಕೊಟ್ಟೂರು ಕ್ಷೇತ್ರದ ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಸಾಮೂಹಿಕ ವಿವಾಹಕ್ಕೆ ವಧು-ವರರು ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ ಆ.5, ನೋಂದಾಯಿಸಿಕೊಂಡಿರುವ ವಧು-ವರರ ವಿವರಗಳನ್ನು ದೇವಾಲಯದಲ್ಲಿ ಪ್ರಕಟಿಸುವ ದಿನಾಂಕ ಆ.10, ವಧುವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಆ.14, ಅಂತಿಮ ವಧು-ವರರ ಪಟ್ಟಿ ಪ್ರಕಟಿಸುವ ದಿನಾಂಕ ಆ.14 ಆಗಿದ್ದು, ಸಾಮೂಹಿಕ ವಿವಾಹವು ಆ.25ರಂದು ಬೆಳಗ್ಗೆ 9ರಿಂದ 9.30ರ ಕಟಕ ಲಗ್ನ ಮೂಹೂರ್ತದಲ್ಲಿ ನಡೆಯುತ್ತದೆ.
ಮೈಲಾರ ಗ್ರಾಮದ ಶ್ರೀಮೈಲಾರಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ಸರಳ ಸಾಮೂಹಿಕ ಮದುವೆಗೆ ವಧು-ವರರು ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ ಆ.5, ನೋಂದಾಯಿಸಿಕೊಂಡಿರುವ ವಧು-ವರರ ವಿವರಗಳನ್ನು ದೇವಾಲಯದಲ್ಲಿ ಪ್ರಕಟಿಸುವ ದಿನಾಂಕ ಆ.10, ವಧುವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಆ.14, ಅಂತಿಮ ವಧು-ವರರ ಪಟ್ಟಿ ಪ್ರಕಟಿಸುವ ದಿನಾಂಕ ಆ.14 ಆಗಿರುತ್ತದೆ ಹಾಗೂ ಶ್ರೀಮೈಲಾರಲಿಂಗೇಶ್ವರ ದೇವಾಲಯದಲ್ಲಿ ಸಾಮೂಹಿಕ ವಿವಾಹಗಳು ಆ.21ರಂದು ಬೆಳಗ್ಗೆ 9ರಿಂದ 9.50ರೊಳಗೆ ಕಟಕ ಲಗ್ನ ಮೂಹೂರ್ತದಲ್ಲಿ ನಡೆಯುತ್ತವೆ.
ಷರತ್ತುಗಳು:
ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರು ದೇವಾಲಯದ ಕಚೇರಿಗೆ ಬಂದು ಅರ್ಜಿ ಪಡೆದು ವಧು ವರರ ಫೋಟೋ ಜನನ ಪ್ರಮಾಣ/ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ಆಧಾರ್ ಕಾರ್ಡ್ ಹಾಗೂ ಪಂಚಾಯತ್/ನಗರಸಭೆ/ಪುರಸಭೆ/ಮಹಾನಗರ ಪಾಲಿಕೆಯವರಿಂದ ಅವಿವಾಹಿತ ದೃಢೀಕರಣ ದಾಖಲೆಗಳನ್ನು ನೀಡಿ ಹೆಸರುಗಳನ್ನು ನೊಂದಾಯಿಸಿಕೊಳ್ಳುವುದು.
ವಧು-ವರರ ಎರಡು ಕಡೆಯ ತಂದೆ-ತಾಯಿಯವರು ವಿವಾಹಕ್ಕೆ ಒಪ್ಪಿ ವಿವಾಹ ದಿನದಂದು ತಂದೆ-ತಾಯಿ ಉಪಸ್ಥಿತಿ ಹಾಗೂ ಎರಡು ಕಡೆಯಿಂದ ಸಾಕ್ಷಿದಾರರು ಇದ್ದಲ್ಲಿ ಮಾತ್ರ ವಿವಾಹವನ್ನು ನಡೆಸಲಾಗುವುದು. ವಧು-ವರರ ತಂದೆ-ತಾಯಿಯವರು ನಿಧನರಾಗಿದ್ದಲ್ಲಿ ಅವರ ವಾರಸುದಾರರ ಸಂಪೂರ್ಣ ಒಪ್ಪಿಗೆ ಇರಬೇಕಾಗಿದ್ದು, ವಿವಾಹ ದಿನದಂದು ಅವರು ಕಡ್ಡಾಯವಾಗಿ ಹಾಜರಿರಬೇಕು.(ನಿಧನದ ಬಗ್ಗೆ ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸುವುದು). ವಧು-ವರರ ಕುಟುಂಬದ ಬಗ್ಗೆ ಕಡ್ಡಾಯವಾಗಿ ಪಡಿತರ ಚೀಟಿಯ(ರೇಷನ್ ಕಾರ್ಡ್) ಪ್ರತಿಯನ್ನು ಸಲ್ಲಿಸುವುದು. ಸಾರ್ವಜನಿಕರಿಂದ ಯಾವುದೇ ದೂರು ಬಂದಲ್ಲಿ ಅಂತಹ ವಿವಾಹವಾಗುವ ವಧು-ವರರ ಬಗ್ಗೆ ಪುನರ್ ಪರಿಶೀಲಿಸಲಾಗುವುದು. ಸರ್ಕಾರದ ನಿಯಮದಂತೆ ಗಂಡಿಗೆ ಕನಿಷ್ಠ 21 ವರ್ಷಗಳು, ಹೆಣ್ಣಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು ಹಾಗೂ ವಯಸ್ಸಿನ ಬಗ್ಗೆ ಸರ್ಕಾರ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕು. ವಧು-ವರರು ಅವರವರ ಸಂಪ್ರದಾಯಕ್ಕೆ ತಕ್ಕಂತೆ ಮದುವೆಗೆ ಅವಶ್ಯವಿರುವ ವಸ್ತುಗಳನ್ನು ವಧು-ವರರ ಕಡೆಯವರು ಮಾಡಿಕೊಳ್ಳುವುದು (ಪಂಚೆ,ಶರ್ಟ್, ಶಲ್ಯಧಾರೆ, ಸೀರೆ, ರವಿಕೆ ಕಣ, ಪೇಟ, ಬಾಸಿಂಗ್,ಟೋಪಿ,ಕಾಲುಂಗುರ ಇತ್ಯಾದಿ)ಹಾಲು ಧಾರೆ ಎರೆಯಲು ಸ್ಟೀಲ್ ಬಕೆಟ್ ಮತ್ತು ಸ್ಟೀಲ್ ಚೆಂಬು ತರುವುದು. ವಧು-ವರರ ಕಡೆಯಿಂದ ಕಡ್ಡಾಯವಾಗಿ ಯಾವುದೇ ವಿಧವಾದ ವರದಕ್ಷಿಣೆಯನ್ನು ಪಡೆಯುವಂತಿಲ್ಲ. ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧು-ವರರ ಮೊದಲನೇ ವಿವಾಹಕ್ಕೆ ಮಾತ್ರ ಅವಕಾಶ, ಎರಡನೇ ವಿವಾಹಕ್ಕೆ ಕಡ್ಡಾಯವಾಗಿ ಅವಕಾಶವಿರುವುದಿಲ್ಲ. ಅವಿವಾಹಿತ/ತೆ ದೃಢೀಕರಣ ಪತ್ರವನ್ನು ಪಿಡಿಓ/ಪುರಸಭೆ/ಕಾಪೆರ್Çೀರೆಷನ್ ಕಮಿಷನರ್ರವರು ದೃಢೀಕರಿಸಬೇಕು.
ಸಾಮೂಹಿಕ ವಿವಾಹಕ್ಕೆ ಸಲ್ಲಿಸುವ ದಾಖಲೆಗಳು ಸುಳ್ಳು ದಾಖಲೆಗಳೆಂದು ದೃಢಪಟ್ಟಲ್ಲಿ, ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ವಧು-ವರರಿಗೆ ವಸ್ತ್ರಗಳಿಗಾಗಿ ಮತ್ತು ಪ್ರೋತ್ಸಾಹಧನವನ್ನಾಗಿ ನೀಡುವ ಮೊತ್ತವನ್ನು ವಿವರ ಕೆಳಕಂಡಂತಿರುತ್ತದೆ) ಅವರವರ ಬ್ಯಾಂಕ್ ಖಾತೆಗಳಿಗೆ ವಿವಾಹದ ನಂತರ ನೇರವಾಗಿ ಜಮಾ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಧು-ವರರ ಬ್ಯಾಂಕ್ ಉಳಿತಾಯ ಖಾತೆಯ ಜೆರಾಕ್ಸ್ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸುವುದು. ಮದುವೆ ಸಮಯದಲ್ಲಿ 100 ಜನರು ಮಾತ್ರ ಭಾಗವಹಿಸತಕ್ಕದ್ದು ಮತ್ತು ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
ವರನಿಗೆ ಪ್ರೋತ್ಸಾಹ ಧನ(ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ) 5 ಸಾವಿರ ರೂ., ವಧುವಿಗೆ ಪ್ರೋತ್ಸಾಹ ಧನ(ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ) 10 ಸಾವಿರ ರೂ., ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು(ಅಂದಾಜು 8 ಗ್ರಾಂ ತೂಕ) 40 ಸಾವಿರ ರೂ. ಸೇರಿ ಒಟ್ಟು ಮೊತ್ತ 55 ಸಾವಿರ ರೂ. ಒಳಗೊಂಡಿರುತ್ತದೆ.
ವಧು-ವರರು ತಮ್ಮ ಹೆಸರುಗಳನ್ನು ನಿಗದಿಪಡಿಸಿದ ದಿನಾಂಕದೊಳಗೆ ದೇವಸ್ಥಾನದ ಕಾರ್ಯಾಲಯದಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಪ್ತಪದಿ ಸಾಮೂಹಿಕ ವಿವಾಹ ನಡೆಯುವ ದೇವಸ್ಥಾನಗಳ ಕಚೇರಿ ಸಂಪರ್ಕಿಸಬಹುದು ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಹೆಚ್.ಪ್ರಕಾಶ್ರಾವ್ ಆವರು ತಿಳಿಸಿದ್ದಾರೆ.