ಬೆಂಗಳೂರು: ಕೋಮುಗಲಭೆ, ಅಗ್ನಿ ದುರಂತ, ಪ್ರವಾಹ, ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾಗುವ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸಾಂತ್ವನ ಯೋಜನೆ ಆರಂಭಿಸಲಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಪ್ರಕೃತಿ ವಿಕೋಪ, ಕೋಮುಗಲಭೆಯಲ್ಲಿ ಸಂತ್ರಸ್ತಾಗಿ ಮನೆ, ಅಂಗಡಿ ಕಳೆದುಕೊಳ್ಳುವ ಸಂತ್ರಸ್ತ ಕುಟುಂಬದವರಿಗೆ 5 ಲಕ್ಷ ರೂಪಾಯಿವರೆಗೆ ಸಾಲ ನೀಡುವ ಯೋಜನೆ ಇದಾಗಿದೆ ಎಂದು ಹೇಳಿದ್ದಾರೆ.
5 ಲಕ್ಷ ರೂ.ನಲ್ಲಿ ಶೇ. 50 ರಷ್ಟು ಅಂದರೆ 2.50 ಲಕ್ಷ ರೂ. ಸಾಲ, ಉಳಿದ ಶೇಕಡ 2.50 ಲಕ್ಷ ರೂ. ಸಬ್ಸಿಡಿ ಸಿಗಲಿದೆ. ಸಾಲಕ್ಕೆ ಶೇಕಡ 3ರಷ್ಟು ಬಡ್ಡಿ ವಿಧಿಸಲಾಗುವುದು. ಈ ಯೋಜನೆಯಡಿ ನೆರವು ಪಡೆದು ಸಂತ್ರಸ್ತ ಕುಟುಂಬದವರು ವ್ಯಾಪಾರ, ಇತರೆ ಉದ್ಯೋಗ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.