ಹುಬ್ಬಳ್ಳಿ: ನಾವು ಹೇಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದೇವೆಯೋ ಅದೇ ರೀತಿ ಬಿಜೆಪಿಯನ್ನು ದೇಶ ಬಿಟ್ಟು ಓಡಿಸಬೇಕು. ಅಂತಹ ದೊಡ್ಡ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಸಚಿವರು, ನೆಹರು, ಇಂದಿರಾ ಗಾಂಧಿ, ವಾಜಪೇಯಿ ಅವರು ಮಾಡಿದ ಕೆಲಸಕ್ಕೂ ಪ್ರಧಾನಿ ಮೋದಿ ಮಾಡಿದ ಕೆಲಸಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಮೋದಿ ಅವರೇ ನೀವು ಹೇಗೆ ರಾಮಮಂದಿರ ಉದ್ಘಾಟನೆ ಮಾಡಿದ್ರೋ ಅದೇ ರೀತಿ ಹಿಂದುಳಿದ ವರ್ಗದವರಿಗೆ ದೇಗುಲ ಪೂಜೆಗೆ ಅವಕಾಶ ಕೊಡಿ ಎಂದು ವಾಗ್ದಾಳಿ ನಡೆಸಿದ್ದಾರೆ.