
ಎರಡು ದಿನಗಳ ರೋಮ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಫಿಯಾಜಾ ಗಾಂಧಿಗೆ ತೆರಳಿ ಮಹಾತ್ಮ ಗಾಂಧಿ ಪುತ್ಥಳಿಗೆ ನಮನ ಸಲ್ಲಿಸಿದ್ದರು.
ಫಿಯಾಜಾ ಗಾಂಧಿಯಲ್ಲಿ ಪ್ರಧಾನಿ ಮೋದಿ ಅಲ್ಲಿ ನೆರೆದಿದ್ದ ಜನರ ಜೊತೆ ಮಾತುಕತೆಗೆ ಮುಂದಾಗುತ್ತಿದ್ದಂತೆಯೇ ಸಂಸ್ಕೃತ ಶ್ಲೋಕಗಳು ಹಾಗೂ ‘ಮೋದಿ ಮೋದಿ’ ಎಂಬ ಘೋಷಣೆಗಳು ಪ್ರತಿಧ್ವನಿಸಿವೆ.
ಪ್ರಧಾನಿ ಮೋದಿ ಎದುರು ನಿಂತ ಮಹಿಳೆಯರು ʼಓಂ ನಮಃ ಶಿವಾಯʼ ಎಂದು ಹೇಳುತ್ತಾ ಶ್ಲೋಕವನ್ನು ಹೇಳಿದರು. ಹಾಗೂ ʼಭಾರತ್ ಮಾತಾ ಕಿ ಜೈʼ ಹಾಗೂ ʼಜೈ ಶ್ರೀರಾಮ್ʼ ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.