
ಚಿಕ್ಕಬಳ್ಳಾಪುರ: ನಾಗರಹಾವು ಕಚ್ಚಿದ ಪರಿಣಾಮ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುಮ್ಮವಾರಂಡ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಮನೆಯ ಮುಂದೆ ರಾತ್ರಿ ಮಲಗಿದ್ದ ವೇಳೆ ಬಾಲಕನಿಗೆ ನಾಗರಾವು ಕಚ್ಚಿದೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಸೂಕ್ತ ಸಂದರ್ಭದಲ್ಲಿ ಬಾಲಕನಿಗೆ ಚಿಕಿತ್ಸೆ ಸಿಗದೇ ಬಾಲಕ ಸಾವನ್ನಪ್ಪಿದ್ದಾನೆ. 3 ವರ್ಷದ ದೀಕ್ಷಿತ್ ಮೃತ ಬಾಲಕ.
ಮಾಲತಿ ಹಾಗೂ ಸುರೇಶ್ ದಂಪತಿಯ ಪುತ್ರ ದೀಕ್ಷಿತ್ ಮನೆಯ ಮುಂದೆ ಕಾಂಪೌಂಡ್ ನಲ್ಲಿ ಮಲಗಿದ್ದ. ಈ ವೇಳೆ ಹಾವು ಕಚ್ಚಿದೆ ಎಂದು ತಿಳಿದುಬಂದಿದೆ.